ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ಗೆ ₹67 ಸಾವಿರ ಕೋಟಿ ಟೆಂಡರ್

ವಾಯು‍‍ಪಡೆಗೆ 97 ತೇಜಸ್‌ ವಿಮಾನ ಪೂರೈಕೆಗೆ ಒಪ್ಪಂದ
Published 13 ಏಪ್ರಿಲ್ 2024, 15:39 IST
Last Updated 13 ಏಪ್ರಿಲ್ 2024, 15:39 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆಗೆ ತೇಜಸ್‌ ಎಂಕೆ–1ಎ ಸರಣಿಯ 97 ಲಘು ಯುದ್ಧ ವಿಮಾನಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್‌), ಕೇಂದ್ರ ರಕ್ಷಣಾ ಸಚಿವಾಲಯವು ಟೆಂಡರ್‌ ನೀಡಿದೆ.

ಈ ಟೆಂಡರ್‌ನ ಒಟ್ಟು ಮೊತ್ತವು ₹67 ಸಾವಿರ ಕೋಟಿ ಆಗಿದೆ.  

ಶತ್ರುಗಳ ಮೇಲೆ ಆಕ್ರಮಣಕಾರಿ ವಾಯು ದಾಳಿ ನಡೆಸುವಲ್ಲಿ ಸ್ವದೇಶಿ ನಿರ್ಮಿತ ತೇಜಸ್‌ ವಿಮಾನವು ಮುಂಚೂಣಿಯಲ್ಲಿದೆ. ವಾಯುಪಡೆಯ ಕಾರ್ಯಾಚರಣೆಗಳಲ್ಲಿ ಇದರ ಪಾತ್ರ ಹೆಚ್ಚಿದೆ. ಅಲ್ಲದೆ, ಶತ್ರುವಿನ ಪಾಳೆಯ, ಆಯಕಟ್ಟಿನ ನೆಲೆಗಳನ್ನು ಪತ್ತೆಹಚ್ಚಲು ಇದು ನೆರವಾಗಲಿದೆ. ನೌಕಾಪಡೆಯ ಕಾರ್ಯಾಚರಣೆಯಲ್ಲೂ ಈ ವಿಮಾನವು ಅದ್ವಿತೀಯ ಪಾತ್ರ ನಿರ್ವಹಿಸಲಿದೆ.

ಭಾರತೀಯ ವಾಯುಪಡೆಗೆ ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸುವ ಸಂಬಂಧ ರಕ್ಷಣಾ ಖರೀದಿ ಪರಿಷತ್ತು (ಡಿಎಸಿ) ಕಳೆದ ನವೆಂಬರ್‌ನಲ್ಲಿಯೇ ಒಪ್ಪಿಗೆ ನೀಡಿತ್ತು. 

ಅಲ್ಲದೆ, ಸುಖೋಯ್–30 ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸಲು ಎಚ್ಎಎಲ್‌ಗೆ ಅನುಮೋದನೆಯನ್ನೂ ನೀಡಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT