ಹುಬ್ಬಳ್ಳಿ: ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣಕ್ಕಾಗಿ, ‘ಕರ್ನಾಟಕ ಜ್ಞಾನಭಂಡಾರ ಹಸ್ತಪ್ರತಿಗಳು ಹಾಗೂ ಡಿಜಿಟಲೀಕರಣ ಮಸೂದೆ–2025’ಕ್ಕೆ ಈಚೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ, ತಾಳೆಗರಿಗಳಲ್ಲಿ ಇರುವ ವಚನ ಸಾಹಿತ್ಯವು ನಾಶವಾಗದಂತೆ, ಅದನ್ನು ಡಿಜಿಟಲೀಕರಣಗೊಳಿಸಿ ಶಾಶ್ವತವಾಗಿ ಕಾಪಾಡುವ ಕಾರ್ಯಕ್ಕೆ ಹಣಕಾಸಿನ ಕೊರತೆ ಉಂಟಾಗಿದೆ.

ಇ–ಸಾಹಿತ್ಯ ದಾಖಲೀಕರಣ, ಸಂಶೋಧನಾ ಕೇಂದ್ರದ ಮುಖ್ಯಸ್ಥ ಅಶೋಕ ದೊಮ್ಮಲೂರು ಅವರು ತಮ್ಮ ತಂಡದೊಂದಿಗೆ ಸ್ವಯಂಪ್ರೇರಿತವಾಗಿ, ಸ್ವಂತ ಹಣ ಹಾಗೂ ಇತರರ ನೆರವಿನೊಂದಿಗೆ ಈವರೆಗೆ 50 ಲಕ್ಷ ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಿದ್ದಾರೆ. ವಿವಿಧೆಡೆ ಕೋಟ್ಯಂತರ ಹಸ್ತಪ್ರತಿಗಳಿದ್ದು, ಆರ್ಥಿಕ ತೊಂದರೆಯಿಂದ ಅವುಗಳ ಡಿಜಿಟಲೀಕರಣಕ್ಕೆ ತೊಡಕಾಗಿದೆ.

‘ಹುಬ್ಬಳ್ಳಿಯ ಮೂರುಸಾವಿರ ಮಠ, ಗದುಗಿನ ತೋಂಟದಾರ್ಯ ಮಠ, ಬೆಳಗಾವಿಯ ನಾಗಲೂರು ರುದ್ರಾಕ್ಷಿ ಮಠ, ಚಿತ್ರದುರ್ಗದ ಸಿರಿಗೆರೆ ಮಠ, ತುಮಕೂರಿನ ಸಿದ್ದಗಂಗಾಮಠ ಸೇರಿ ಧಾರವಾಡ, ಗುಲಬರ್ಗಾ, ಶಿವಮೊಗ್ಗ ವಿಶ್ವವಿದ್ಯಾಲಯಗಳಲ್ಲಿ ಹಸ್ತಪ್ರತಿಗಳನ್ನು ಉಚಿತವಾಗಿ ಡಿಜಿಟಲೀಕರಣ ಮಾಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ, ಕೆಳದಿ ವಸ್ತುಸಂಗ್ರಹಾಲಯದಲ್ಲಿನ ತಾಳೆಗರಿಗಳ ಡಿಜಿಟಲೀಕರಣ ಮಾಡಬೇಕಿದೆ. ದಿನಕ್ಕೆ 15,000 ಪ್ರತಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದ್ದು, ತಿಂಗಳಿಗೆ ಕನಿಷ್ಠ ₹4.50 ಲಕ್ಷ ಖರ್ಚಾಗುತ್ತಿದೆ’ ಎಂದು ಕೇಂದ್ರದ ಅಶೋಕ ದೊಮ್ಮಲೂರು ಹೇಳಿದರು.

‘ನನ್ನದೇ ಖಾಸಗಿ ಕಂಪನಿ ಇರುವುದರಿಂದ, ಅದರಿಂದ ಬರುವ ಹಣದಲ್ಲಿ ₹1.50 ಲಕ್ಷವನ್ನು ಈ ಕಾರ್ಯಕ್ಕೆ ವಿನಿಯೋಗಿಸುತ್ತಿರುವೆ. 6 ತಿಂಗಳಿನಿಂದ ದೆಹಲಿಯ ಇಂಧು ನೆಟ್ವರ್ಕ್ ಸಂಸ್ಥೆಯಿಂದ ಭಾಗಶಃ ನೆರವು ಸಿಗುತ್ತಿದೆ. ಸರ್ಕಾರದಿಂದಾಗಲೀ, ಮಠಗಳಿಂದಾಗಲೀ ನೆರವು ಸಿಕ್ಕಿಲ್ಲ’ ಎಂದರು.

‘ಇಲ್ಲಿಯವರೆಗೆ ಆಗಿರುವುದು ವಚನಗಳ ಸಂಗ್ರಹವಷ್ಟೇ, ಪರಿಷ್ಕರಣೆ ಅಲ್ಲವೆಂದು ಫ.ಗು.ಹಳಕಟ್ಟಿ, ಎಂ.ಎಂ.ಕಲಬುರ್ಗಿ ಅವರೂ ಹೇಳಿದ್ದಾರೆ. ವಚನ ಸಾಹಿತ್ಯ ಅಧಿಕೃತವಾಗಬೇಕಾದರೆ, ತಾಳೆಗರಿಗಳಲ್ಲಿನ ಹಸ್ತಪ್ರತಿಗಳ ಡಿಜಿಟಲೀಕರಣ ಹಾಗೂ ಸಮಗ್ರ ಅಧ್ಯಯನ ಅವಶ್ಯವಿದೆ. ಇದಕ್ಕಾಗಿ ನಾನು, ತಂಡದೊಂದಿಗೆ ಶ್ರಮಿಸುತ್ತಿರುವೆ. ಸೀಮಿತ ಆರ್ಥಿಕ ಸಂಪನ್ಮೂಲದಲ್ಲೇ 2013ರಿಂದ ಡಿಜಿಟಲೀಕರಣ ಪ್ರಕ್ರಿಯೆ ನಿರಂತರವಾಗಿ ಜರುಗುತ್ತಿದೆ. ಹೆಚ್ಚಿನ ನೆರವು ಸಿಕ್ಕರೆ ವಚನ ಸಾಹಿತ್ಯಕ್ಕೆ ಹೊಸ ಆಯಾಮ ಸಿಗಬಹುದು’ ಎಂದು ಹೇಳಿದರು.

ಸದ್ಯ ದೊರೆತ ಹಸ್ತಪ್ರತಿಗಳು 200–300 ವರ್ಷಗಳಷ್ಟು ಹಳೆಯವು. ಮೂಲ ಹಸ್ತಪ್ರತಿಗಳ ಹುಡುಕಾಟದಲ್ಲಿದ್ದೇವೆ. ಅದಕ್ಕಾಗಿ ಜೈನರ ಬಸದಿಗಳಲ್ಲಿ ಸಂಶೋಧನೆ ನಡೆಯುತ್ತಿದೆ.
– ಅಶೋಕ ದೊಮ್ಮಲೂರು, ಮುಖ್ಯಸ್ಥ ಇ–ಸಾಹಿತ್ಯ ದಾಖಲೀಕರಣ ಸಂಶೋಧನಾ ಕೇಂದ್ರ

‘ಸೂಕ್ತ ಸಂಗ್ರಹಕ್ಕೂ ಖರ್ಚು’

‘ವಿಶ್ವವಿದ್ಯಾಲಯಗಳಲ್ಲೂ ನಿಧಿ ಇಲ್ಲದ ಕಾರಣ ನಮಗೆ ನೆರವು ಸಿಗುತ್ತಿಲ್ಲ. ತಂಡದಲ್ಲಿರುವ 15 ಜನರಿಗೆ ತಿಂಗಳಿಗೆ ₹15000 ವೇತನ ಶಾಸನ ತಜ್ಞರು ಹಸ್ತಪ್ರತಿ ತಜ್ಞರು ಲಿಪಿ ಓದುವವರು ಪರಿಷ್ಕರಣೆ ಮಾಡುವವರಿಗೆ ಗೌರವಧನ ಊಟ–ವಸತಿ ವ್ಯವಸ್ಥೆ ಮಾಡಿಕೊಡಬೇಕು. ಬಹುತೇಕ ಕಡೆ ಹಸ್ತಪ್ರತಿಗಳನ್ನು ಸರಿಯಾಗಿ ಸಂಗ್ರಹಿಸದ ಕಾರಣ ತಾಳೆಗರಿಗಳು ಹಾಳಾಗಿವೆ. ಅವನ್ನು ಫಮಿಗೇಷನ್ ಚೇಂಬರ್ನಲ್ಲಿಟ್ಟು ಲೆಮನ್ ಗ್ರಾಸ್ ಲೇಪನ ಮಾಡಿ ನಂತರ ಅಧ್ಯಯನ ಮಾಡಬೇಕಿದೆ. ಹಾಳಾಗದಂತೆ ಹೊಸಬಟ್ಟೆಯಲ್ಲಿ ಸುತ್ತಿ ಕೊಡುತ್ತೇವೆ. ಇದಕ್ಕೆಲ್ಲ ಹೆಚ್ಚು ಖರ್ಚಾಗುತ್ತದೆ’ ಎಂದು ಅಶೋಕ ದೊಮ್ಮಲೂರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.