ನವದೆಹಲಿ: ಠೇವಣಿದಾರರು ತಮ್ಮ ಕ್ಲೇಮ್‌ಗಳ ಸ್ಥಿತಿ ಪತ್ತೆಹಚ್ಚಲು ‘ಠೇವಣಿ ಮತ್ತು ಸಾಲ ಖಾತರಿ ನಿಗಮ’ವು (ಡಿಐಸಿಜಿಸಿ) ‘ದಾವಾ ಸೂಚಕ್’ ಆನ್‌ಲೈನ್ ವ್ಯವಸ್ಥೆಯನ್ನು ಪರಿಚಯಿಸಿದೆ.
‘ಬ್ಯಾಂಕ್ ಠೇವಣಿದಾರರು ಡಿಐಜಿಸಿಸಿ ವೆಬ್‌ಸೈಟ್‌ನಲ್ಲಿ ಬ್ಯಾಂಕ್ ಖಾತೆ ಜತೆಗೆ ಸಂಪರ್ಕ ಹೊಂದಿರುವ ಮೊಬೈಲ್ ಸಂಖ್ಯೆ ನಮೂದಿಸುವ ಮೂಲಕ ಕ್ಲೇಮ್‌ಗಳ ಸ್ಥಿತಿಯನ್ನು ತಿಳಿದುಕೊಳ್ಳಬಹುದು’ ಎಂದು ಡಿಐಸಿಜಿಸಿ ತಿಳಿಸಿದೆ. ‘ದಾವಾ–ಸೂಚಕ್’ ವ್ಯವಸ್ಥೆಯು ಗ್ರಾಹಕಸ್ನೇಹಿ ವ್ಯವಸ್ಥೆಯಾಗಿದ್ದು, ಬ್ಯಾಂಕ್ ಠೇವಣಿದಾರರಿಗೆ ಅತ್ಯುತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಡಿಐಜಿಸಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.