ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರವಿದ್ಯುತ್ ಘಟಕ ಆರಂಭಿಸಿದ ‘ಡಾಲರ್’

Last Updated 6 ಅಕ್ಟೋಬರ್ 2020, 15:25 IST
ಅಕ್ಷರ ಗಾತ್ರ

ಬೆಂಗಳೂರು: ಒಳ ಉಡುಪುಗಳ ಉತ್ಪಾದನೆಯಲ್ಲಿ ದೇಶದ ಮುಂಚೂಣಿ ಕಂಪನಿಗಳಲ್ಲಿ ಒಂದಾಗಿರುವ ‘ಡಾಲರ್ ಇಂಡಸ್ಟ್ರೀಸ್ ಲಿಮಿಟೆಡ್’, ತಮಿಳುನಾಡಿನ ತಿರುಪುರದಲ್ಲಿ 4 ಮೆಗಾವಾಟ್‌ ಸಾಮರ್ಥ್ಯದ ಸೌರವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿದೆ. ಈ ಘಟಕವು ವಾರ್ಷಿಕ 75 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕಂಪನಿಯ ‘ಹಸಿರು ಅಭಿಯಾನ’ದ ಭಾಗವಾಗಿ ಆರಂಭವಾಗಿದೆ.

‘ನಾವು ಯಾವಾಗಲೂ ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ ಕೆಲಸ ಮಾಡಿದ್ದೇವೆ. ಪರಿಸರಸ್ನೇಹಿ ಕ್ರಮಗಳ ಬಗ್ಗೆ ಗಮನ ನೀಡುತ್ತ ಬಂದಿದ್ದೇವೆ. ಸಾಂಕ್ರಾಮಿಕದಿಂದಾಗಿ ಎದುರಾಗಿರುವ ಪರಿಸ್ಥಿತಿಯಲ್ಲಿ ವೆಚ್ಚಗಳನ್ನು ಕಡಿಮೆ ಮಾಡುವುದು ಮುಖ್ಯ. ಹಾಗೆಯೇ, ಪರಿಸರ ಪೂರಕ ತಯಾರಿಕಾ ಘಟಕ ಹೊಂದಿರುವುದೂ ಮುಖ್ಯವಾಗುತ್ತದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಕುಮಾರ್ ಗುಪ್ತ ಹೇಳಿದ್ದಾರೆ.

‘ಸೌರವಿದ್ಯುತ್ ಉತ್ಪಾದನಾ ಘಟಕದ ಯೋಜನೆಯು ನವೀಕರಿಸಬಹುದಾದ ಉತ್ಪಾದನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ವಿಚಾರದಲ್ಲಿ ಕಂಪನಿ ಹೊಂದಿರುವ ಬದ್ಧತೆಗೆ ಅನುಗುಣವಾಗಿ ಇದೆ’ ಎಂಬ ಮಾತನ್ನು ಅವರು ಹೇಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಈ ಘಟಕ ಸ್ಥಾಪಿಸಲು ಕಂಪನಿಯು ₹ 18 ಕೋಟಿ ವೆಚ್ಚ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT