ಇ–ಕಾಮರ್ಸ್‌:ಬೆಲೆ ಕಡಿತಕ್ಕೆ ಕಡಿವಾಣ

5
ರಾಷ್ಟ್ರೀಯ ಕರಡು ನೀತಿ ಪ್ರಕಟ

ಇ–ಕಾಮರ್ಸ್‌:ಬೆಲೆ ಕಡಿತಕ್ಕೆ ಕಡಿವಾಣ

Published:
Updated:

ನವದೆಹಲಿ: ಆನ್‌ಲೈನ್‌ ಮಾರುಕಟ್ಟೆ ತಾಣಗಳ (ಇ–ಕಾಮರ್ಸ್‌) ವಹಿವಾಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಕರಡು ನೀತಿ ಪ್ರಕಟಿಸಿದೆ.

ಇ–ಕಾಮರ್ಸ್‌ ಸಂಸ್ಥೆಗಳು ವಿವಿಧ ಸರಕುಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಬೆಲೆಗಳಲ್ಲಿ ಭಾರಿ ಕಡಿತ ಘೋಷಿಸುವುದನ್ನು ನಿರ್ಬಂಧಿಸಲು ಈ ಕರಡು ನೀತಿಯಲ್ಲಿ ಶಿಫಾರಸು ಮಾಡಲಾಗಿದೆ.

ಇಂತಹ ವಹಿವಾಟಿನಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು ಯಾವುದೇ ಸರಕು ಅಥವಾ ಸೇವೆಯ ಬೆಲೆ ಮತ್ತು ಮಾರಾಟದ ಮೇಲೆ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಪ್ರಭಾವ ಬೀರುವುದನ್ನು ಈ ನೀತಿಯಲ್ಲಿ ನಿರ್ಬಂಧಿಸಲಾಗಿದೆ. ಗ್ರಾಹಕರಿಗೆ ಭಾರಿ ರಿಯಾಯ್ತಿ ಕೊಡುಗೆಗಳನ್ನು ನೀಡುವುದಕ್ಕೆ ಮುಂಚಿತವಾಗಿಯೇ ಇಂತಹ ಕೊಡುಗೆಗಳ ಗರಿಷ್ಠ ಅವಧಿಯನ್ನು ನಿಗದಿಪಡಿಸಲೂ ಉದ್ದೇಶಿಸಲಾಗಿದೆ.

ಈ ಆರಂಭಿಕ ಕರಡು ನೀತಿಯನ್ನು ಎಲ್ಲ ಭಾಗಿದಾರರಿಗೆ ರವಾನಿಸಲಾಗಿದ್ದು, ಸಲಹೆ – ಸೂಚನೆಗಳನ್ನು ಆಹ್ವಾನಿಸಲಾಗಿದೆ. ಇ–ಕಾಮರ್ಸ್‌ ವಹಿವಾಟಿನಲ್ಲಿನ ಸ್ಪರ್ಧಾತ್ಮಕತೆ ವಿರೋಧಿ ವಿವಾದಗಳನ್ನು ಬಗೆಹರಿಸುವುದು ಈ ಸಲಹೆಗಳ  ಉದ್ದೇಶವಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !