ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಸಾವಿರ ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಡಿ.ಎಸ್. ಗ್ರೂಪ್‌ನ ಕ್ಯಾಚ್‌ ಸ್ಪೈಸಸ್‌

Published 19 ಏಪ್ರಿಲ್ 2024, 16:27 IST
Last Updated 19 ಏಪ್ರಿಲ್ 2024, 16:27 IST
ಅಕ್ಷರ ಗಾತ್ರ

ಬೆಂಗಳೂರು: ಧರ್ಮಪಾಲ್‌ ಸತ್ಯಪಾಲ್‌ ಗ್ರೂಪ್‌ನ (ಡಿ.ಎಸ್. ಗ್ರೂಪ್‌) ಕ್ಯಾಚ್‌ ಸ್ಪೈಸಸ್‌, ₹1 ಸಾವಿರ ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ. 

ಈಗಾಗಲೇ, ಶೇ 24ರಷ್ಟು ಪ್ರಗತಿ ಸಾಧಿಸಿರುವ ಕ್ಯಾಚ್‌ ಸ್ಪೈಸಸ್‌ ಮುಂದಿನ ಐದು ವರ್ಷಗಳಲ್ಲಿ ಶೇ 30ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸುವ ಗುರಿ ಹೊಂದಿದೆ ಎಂದು ಕಂಪನಿ ತಿಳಿಸಿದೆ.

1987ರಲ್ಲಿ ಆರಂಭವಾದ ಡಿ.ಎಸ್‌. ಗ್ರೂಪ್‌ನ ಕ್ಯಾಚ್‌ ಬ್ರ್ಯಾಂಡ್ ಪ್ರಸ್ತುತ 125ಕ್ಕೂ ಹೆಚ್ಚು ಮಾದರಿಗಳು ಮತ್ತು 300 ಎಸ್‌.ಕೆ.ಯುಗಳನ್ನು ಹೊಂದಿದೆ. ದೇಶದಾದ್ಯಂತ 1,500ಕ್ಕೂ ಹೆಚ್ಚು ವಿತರಕರ ಮೂಲಕ 7 ಲಕ್ಷ ರಿಟೇಲ್‌ ಕೇಂದ್ರಗಳಲ್ಲಿ ಕ್ಯಾಚ್‌ ಉತ್ಪನ್ನಗಳು ಲಭ್ಯವಿವೆ ಎಂದು ತಿಳಿಸಿದೆ.

ಕ್ಯಾಚ್‌ ಉಪ್ಪು ಮತ್ತು ಮಸಾಲೆಗಳನ್ನು ದೇಶದ 2 ಕೋಟಿ ಮನೆಗಳಲ್ಲಿ ಬಳಲಾಗುತ್ತಿದೆ. ಇ–ಕಾಮರ್ಸ್‌ ವೇದಿಕೆಗಳ ಮೂಲಕ ಗ್ರಾಹಕರಿಗೆ ತ್ವರಿತವಾಗಿ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದೆ.

2023ರಲ್ಲಿ ದೇಶದ ಮಸಾಲೆ ಉದ್ಯಮದ ವಹಿವಾಟು ಸುಮಾರು ₹34 ಸಾವಿರ ಕೋಟಿಯಷ್ಟಿದೆ. ಇದರಲ್ಲಿ ಶೇ 23ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ನಟ ಅಕ್ಷಯ್‌ ಕುಮಾರ್‌, ನಟಿಯರಾದ ಭೂಮಿ ಪಡ್ನೇಕರ್‌ ಮತ್ತು ಕೃತಿ ಕರಬಂಧ ಅವರು ಕಂಪನಿಯ ಬ್ರ್ಯಾಂಡ್‌ ರಾಯಭಾರಿಗಳಾಗಿದ್ದಾರೆ ಎಂದು ತಿಳಿಸಿದೆ. 

‘ಗ್ರಾಹಕ ಕೇಂದ್ರಿತ ವಿಧಾನದ ಮೂಲಕ ಕ್ಯಾಚ್‌ ಸ್ಪೈಸಸ್‌ ₹1 ಸಾವಿರ ಕೋಟಿ ಬ್ರ್ಯಾಂಡ್‌ ಮೈಲಿಗಲ್ಲು ದಾಟಿದೆ. ಸ್ಥಿರವಾ‌ದ ಗುಣಮಟ್ಟ, ವಿಶ್ವಾಸಾರ್ಹತೆಗೆ ಕ್ಯಾಚ್‌ ಸ್ಪೈಸಸ್‌ ಪರ್ಯಾಯ ಹೆಸರಾಗಿದೆ’ ಎಂದು ಡಿ.ಎಸ್‌. ಗ್ರೂಪ್‌ನ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT