ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಾಟಾದಿಂದ #Easy To EV ಅಭಿಯಾನ

Published 13 ಜೂನ್ 2024, 19:15 IST
Last Updated 13 ಜೂನ್ 2024, 19:15 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಮೋಟರ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ) ಇದೀಗ ಈಸಿಟುಇವಿ (#Easy To EV) ಅಭಿಯಾನ ಪ್ರಾರಂಭಿಸಿದೆ. 

ಈ ಅಭಿಯಾನದ ಮೂಲಕ ಗ್ರಾಹಕರಲ್ಲಿ ವಿದ್ಯುತ್‌ ಚಾಲಿತ ವಾಹನ (ಇ.ವಿ) ಕುರಿತಾಗಿ ಇರುವ ಸುಳ್ಳುಗಳನ್ನು ತೊಡೆದು ಹಾಕುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ, ವಾಹನಗಳ ಮಾಲೀಕರಲ್ಲಿ ವಿಶ್ವಾಸ  ಬೆಳೆಸುವ ಗುರಿ ಹೊಂದಿದೆ. 

ಈ ಅಭಿಯಾನವು ಕಳೆದ ವರ್ಷದ ಟಾಟಾ ಐಪಿಎಲ್ ಸಮಯದಲ್ಲಿ ಬಿಡುಗಡೆಯಾದ ಟಾಟಾ ಇ.ವಿಯ ಗೋ ಇ.ವಿ ಸರಣಿಯ ವಿಡಿಯೊಗಳ ವಿಸ್ತರಣೆಯಾಗಿದೆ. ಚಿಕ್ಕದಾಗಿ, ಸರಳವಾಗಿ ಸೊಗಸಾದ ಕಥೆ ಹೇಳುವ ಈ ಸರಣಿಯ ವಿಡಿಯೊಗಳು ಇ.ವಿಗಳಿಗೆ ಸಂಬಂಧಿಸಿದ ಸುಳ್ಳುಗಳನ್ನು ತೊಡೆದು ಹಾಕಲಿವೆ ಎಂದು ಕಂಪನಿ ತಿಳಿಸಿದೆ.

ದೂರದ ಪ್ರಯಾಣಕ್ಕೆ ಇ.ವಿಗಳು ಹೇಗೆ ಪರಿಪೂರ್ಣ ಎಂಬ ವಿಚಾರ ಕುರಿತು ಮೊದಲ ವಿಡಿಯೊ ಪ್ರಸಾರವಾಗಲಿದೆ. ಆ ಮೂಲಕ ಆತಂಕವನ್ನು ತೊಡೆದು ಹಾಕಲಾಗುತ್ತದೆ ಎಂದು ತಿಳಿಸಿದೆ.

ಟಾಟಾ ಇ.ವಿಯ ಪ್ರಮುಖ ಮೂರು ಆಧಾರ ಸ್ತಂಭಗಳಾದ ಸಮುದಾಯ, ತಂತ್ರಜ್ಞಾನ ಮತ್ತು ಸುಸ್ಥಿರತೆ ವಿಚಾರಗಳಿಗೆ ಅನುಗುಣವಾಗಿ ನಡೆಯುತ್ತಿರುವ ಈ ಅಭಿಯಾನವು ಇ.ವಿಗಳ ಬಳಕೆ ಹೆಚ್ಚಿಸುವ ಬದ್ಧತೆ ಹೊಂದಿದೆ. ಇದರ ಜೊತೆಗೆ ಈ ಅಭಿಯಾನವು ಖರೀದಿದಾರರ ವಿಶ್ವಾಸವನ್ನು ಹೆಚ್ಚಿಸುವ ಮೂಲಕ ಭಾರತದಲ್ಲಿ ಟಾಟಾ ಇ.ವಿಯ ಬಳಕೆಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಟಾಟಾ ಇ.ವಿಯ ವಾಸ್ತವಗಳು:

  • ಕೇವಲ 20 ನಿಮಿಷ ಚಾರ್ಜ್‌ ಮಾಡುವ ಮೂಲಕ ಟಾಟಾ ಇ.ವಿಯಲ್ಲಿ 100 ಕಿ.ಮೀ ರೇಂಜ್ ಹೊಂದಬಹುದು

  • ಇ.ವಿಯ ಬ್ಯಾಟರಿ ಕೂಡ ಅದರ ವಾರಂಟಿ ಅವಧಿಯನ್ನು ಮೀರಿ ಬಾಳಿಕೆ ಬರುತ್ತದೆ

  • ಇ.ವಿಯಲ್ಲಿ ಕಡಿಮೆ ಭಾಗಗಳಿರುವುದರಿಂದ ನಿರ್ವಹಣಾ ವೆಚ್ಚ ಕಡಿಮೆ ಇರುತ್ತದೆ

  • ಪೆಟ್ರೋಲ್ ಬಳಕೆಯ ವಾಹನಕ್ಕೆ ಹೋಲಿಸಿದರೆ ಇ.ವಿಯಲ್ಲಿ 5 ವರ್ಷಗಳಲ್ಲಿ ₹4.2 ಲಕ್ಷಕ್ಕಿಂತ ಹೆಚ್ಚು ಉಳಿತಾಯ ಮಾಡಬಹುದು

  • ಭಾರತೀಯ ರಸ್ತೆಯಲ್ಲಿ 1.5 ಲಕ್ಷಕ್ಕೂ ಹೆಚ್ಚು ಟಾಟಾ ಇ.ವಿಗಳಿವೆ

  • ಭಾರತವು ಪ್ರಸ್ತುತ 12,000 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ

  • ಇ.ವಿಯ ಮೋಟರ್ ಮತ್ತು ಬ್ಯಾಟರಿ ಐಪಿ 67 ರೇಟಿಂಗ್ ಹೊಂದಿದೆ. ಇದು ವಾಟರ್ ಪ್ರೂಫ್ ಹಾಗೂ ಡಸ್ಟ್ ಪ್ರೂಫ್ ಆಗಿದೆ.

  • ಇ.ವಿ ಅನ್ನು ಮನೆಯಲ್ಲಿಯೇ ಸುಲಭವಾಗಿ ಚಾರ್ಜ್ ಮಾಡಬಹುದಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT