ಸೋಮವಾರ, ಜೂಲೈ 6, 2020
23 °C

ವಿದ್ಯುತ್‌ ಚಾಲಿತವಾಹನ ಮಾರಾಟ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳ (ಇವಿ) ಮಾರಾಟವು 2019–20ರಲ್ಲಿ ಶೇ 20ರಷ್ಟು ಹೆಚ್ಚಾಗಿದ್ದು 1.56 ಲಕ್ಷಕ್ಕೆ ತಲುಪಿದೆ ಎಂದು ವಿದ್ಯುತ್‌ ಚಾಲಿತ ವಾಹನಗಳ ತಯಾರಕರ ಸಂಘ (ಎಸ್‌ಎಂಇವಿ) ತಿಳಿಸಿದೆ. 2018–19ರಲ್ಲಿ ಒಟ್ಟಾರೆ 1.3 ಲಕ್ಷ ‘ಇವಿ’ಗಳ ಮಾರಾಟವಾಗಿತ್ತು.

ದ್ವಿಚಕ್ರ ವಾಹನ ಮಾರಾಟದಲ್ಲಿ ಹೆಚ್ಚಿನ ಏರಿಕೆ ಆಗುತ್ತಿರುವುದರಿಂದ ಒಟ್ಟಾರೆ ಮಾರಾಟವೂ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ.

ಇದರಲ್ಲಿ ಇ–ರಿಕ್ಷಾ ಮಾರಾಟದ ಅಂಕಿ–ಅಂಶಗಳು ಸೇರಿಲ್ಲ. ಇದು ಅಸಂಘಟಿತ ವಲಯವಾಗಿದ್ದು ಒಟ್ಟು 90 ಸಾವಿರದಷ್ಟು ವಾಹನಗಳು ಮಾರಾಟವಾಗಿವೆ. 2018–19ರಲ್ಲಿ ಮಾರಾಟದ ಅಂಕಿ–ಅಂಶಗಳು ದೊರೆತಿಲ್ಲ ಎಂದು ಹೇಳಿದೆ.

ಪ್ರೀಮಿಯಂ ವಿಭಾಗದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಬಳಕೆಯು ದ್ವಿತೀಯಾರ್ಧದಲ್ಲಿ ಸಕಾರಾತ್ಮಕವಾಗಿದ್ದು 2020–21ರಲ್ಲಿ ಉತ್ತಮ ಬೆಳವಣಿಗೆ ಕಾಣುವ ಸೂಚನೆ ನೀಡಿದೆ.

‘ಇವಿ ಉದ್ಯಮವು ಉತ್ತಮ ಬೆಳವಣಿಗೆ ಕಾಣುತ್ತಿದೆ. ಕೋವಿಡ್‌–19 ಬಿಕ್ಕಟ್ಟಿನ ಹೊರತಾಗಿಯೂ 2020–21ರಲ್ಲಿ ಉದ್ಯಮವು ಪ್ರಗತಿ ಕಾಣುವ ವಿಶ್ವಾಸವಿದೆ’ ಎಂದು ಸಂಘದ ಪ್ರಧಾನ ನಿರ್ದೇಶಕ ಸೋಹಿಂದರ್‌ ಗಿಲ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು