ವಾಣಿಜ್ಯ ಉದ್ದೇಶ: ವಿದ್ಯುತ್‌ ಚಾಲಿತಕಾರ್‌, ಬೈಕ್‌ ಬಳಕೆಗೆ ಗಡುವು

ಸೋಮವಾರ, ಜೂನ್ 17, 2019
31 °C

ವಾಣಿಜ್ಯ ಉದ್ದೇಶ: ವಿದ್ಯುತ್‌ ಚಾಲಿತಕಾರ್‌, ಬೈಕ್‌ ಬಳಕೆಗೆ ಗಡುವು

Published:
Updated:
Prajavani

ನವದೆಹಲಿ: ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್‌ ಚಾಲಿತ ಹೊಸ ಕಾರ್‌ ಮತ್ತು ಬೈಕ್‌ಗಳನ್ನು ಹಂತ ಹಂತವಾಗಿ ಬಳಸುವುದನ್ನು ಜಾರಿಗೆ ತರಲು ನೀತಿ ಆಯೋಗವು ಗಡುವು ನಿಗದಿಪಡಿಸಿದೆ.

2026ರ ಏಪ್ರಿಲ್‌ನಿಂದ ವಾಣಿಜ್ಯ ಬಳಕೆಗೆ ಮಾರಾಟವಾಗುವ ಹೊಸ ಕಾರ್‌ಗಳು ಮತ್ತು  2023ರ ಏಪ್ರಿಲ್‌ನಿಂದ ಮಾರಾಟವಾಗುವ ಬೈಕ್‌ಗಳು ವಿದ್ಯುತ್‌ ಚಾಲಿತವಾಗಿರಬೇಕು ಎಂದು ಸರ್ಕಾರದ ಚಿಂತಕರ ಚಾವಡಿಯಾಗಿರುವ ನೀತಿ ಆಯೋಗದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಮೊಬೈಲ್‌ ಆ್ಯಪ್‌ ಆಧಾರಿತ ಬಾಡಿಗೆ ಟ್ಯಾಕ್ಸಿ ಸೇವೆಗಳಾದ ಓಲಾ ಮತ್ತು ಉಬರ್‌ನಂತಹ ಸಂಸ್ಥೆಗಳು ಹಂತ ಹಂತವಾಗಿ ವಿದ್ಯುತ್‌ ಚಾಲಿತ ಕಾರ್‌ಗಳನ್ನು ಬಳಕೆಗೆ ತರಬೇಕು. 2026ರಿಂದ ಇಂತಹ ಕಾರ್‌ಗಳ ಸಂಖ್ಯೆ ಶೇ 40ರಷ್ಟು ಜಾರಿಗೆ ಬರಬೇಕು ಎಂದು ಗಡುವು ವಿಧಿಸಲಾಗಿದೆ. ಮಾಲಿನ್ಯ ಮಟ್ಟವನ್ನು ಗಮನಾರ್ಹವಾಗಿ ತಗ್ಗಿಸಲು ಮತ್ತು ಪರಿಸರ ಸ್ನೇಹಿ ಶುದ್ಧ ಇಂಧನ ಬಳಕೆ ಹೆಚ್ಚಿಸಲು ಈ ನಿರ್ಧಾರಕ್ಕೆ ಬರಲಾಗಿದೆ.

ಆಹಾರ ವಿತರಣೆ ಮತ್ತು ಇ–ಕಾಮರ್ಸ್‌ ಸಂಸ್ಥೆಗಳು ತಮ್ಮ ಸರಕುಗಳ ವಿತರಣೆಗೆ ಬಳಸುವ ಬೈಕ್‌ ಮತ್ತು ಸ್ಕೂಟರ್‌ಗಳು ಕೂಡ ವಿದ್ಯುತ್‌ ಚಾಲಿತವಾಗಿರಬೇಕು ಎಂದು ಮೇ 28 ರಂದು ಸಭೆ ಸೇರಿದ್ದ ನೀತಿ ಆಯೋಗದ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !