ಪಿಎಫ್‌: ಸ್ವಯಂಚಾಲಿತ ವರ್ಗಾವಣೆ

ಬುಧವಾರ, ಮಾರ್ಚ್ 27, 2019
26 °C
ಮುಂದಿನ ವರ್ಷದಿಂದ ಜಾರಿಗೆ ‘ಇಪಿಎಫ್‌ಒ’ ಕ್ರಮ

ಪಿಎಫ್‌: ಸ್ವಯಂಚಾಲಿತ ವರ್ಗಾವಣೆ

Published:
Updated:
Prajavani

ನವದೆಹಲಿ: ಉದ್ಯೋಗಿಗಳು ವೃತ್ತಿ ಅಥವಾ ತಾವು ಕೆಲಸ ಮಾಡುವ ಸಂಸ್ಥೆ ಬದಲಿಸಿದ ಸಂದರ್ಭದಲ್ಲಿ   ಭವಿಷ್ಯನಿಧಿಯಲ್ಲಿನ (ಪಿಎಫ್‌) ಮೊತ್ತವು ಸ್ವಯಂಚಾಲಿತವಾಗಿ ಹೊಸ ಖಾತೆಗೆ ವರ್ಗಾವಣೆಯಾಗುವ ಸೌಲಭ್ಯ ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ.

ಹೊಸ ವ್ಯವಸ್ಥೆಯಲ್ಲಿ, ಹೊಸ ಮಾಲೀಕನು ತನ್ನ ಸಂಸ್ಥೆ ಸೇರಿದ ಹೊಸ ಉದ್ಯೋಗಿಯ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ಉಲ್ಲೇಖಿಸಿ ತಿಂಗಳ ‘ಇಪಿಎಫ್‌’ ರಿಟರ್ನ್‌ ಸಲ್ಲಿಸುತ್ತಿದ್ದಂತೆ, ಉದ್ಯೋಗಿಯು ಹಿಂದಿನ ಸಂಸ್ಥೆಯಲ್ಲಿ ಗಳಿಸಿದ್ದ ಮೊತ್ತವು ಸ್ವಯಂಚಾಲಿತವಾಗಿ ಹೊಸ ಖಾತೆಗೆ ವರ್ಗಾವಣೆಗೊಳ್ಳಲಿದೆ.

ಸದ್ಯಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ‘ಯುಎಎನ್‌’ ಹೊಂದಿದ್ದರೂ, ಉದ್ಯೋಗ ಬದಲಿಸಿದ ಸಂದರ್ಭದಲ್ಲಿ ಹಳೆಯ ‘ಪಿಎಫ್‌’ ಮೊತ್ತವನ್ನು ಹೊಸ ಖಾತೆಗೆ ವರ್ಗಾಯಿಸಲು ಮನವಿ ಸಲ್ಲಿಸಬೇಕಾಗುತ್ತದೆ. ಪ್ರತಿ ವರ್ಷ ಇಂತಹ 8 ಲಕ್ಷ ಮನವಿಗಳನ್ನು ಸಲ್ಲಿಸಲಾಗುತ್ತಿದೆ.

‘ಹೊಸ ವ್ಯವಸ್ಥೆಯು ಜಾರಿಗೆ ಬರುತ್ತಿದ್ದಂತೆ ಪಿಎಫ್‌ ಸದಸ್ಯರಿಗೆ ಹೆಚ್ಚಿನ ಪ್ರಯೋಜನಗಳೂ ದೊರೆಯಲಿವೆ. ಅವರ ‘ಯುಎಎನ್‌’, ಬ್ಯಾಂಕ್‌ ಖಾತೆಯಂತೆ ಇರಲಿದೆ. ಉದ್ಯೋಗಿಯು ವೃತ್ತಿ, ಸಂಸ್ಥೆ ಬದಲಿಸಿದರೂ ಸಾಮಾಜಿಕ ಸುರಕ್ಷತಾ ಪ್ರಯೋಜನಗಳನ್ನು ‘ಯುಎಎನ್‌’ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು. ಈ ಸಂಖ್ಯೆ ಉದ್ಯೋ ಗಿಯ ಬದುಕಿನ ಉದ್ದಕ್ಕೂ ಬದಲಾಗುವುದಿಲ್ಲ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಉದ್ಯೋಗಿಯ ಭವಿಷ್ಯ ನಿಧಿಯಲ್ಲಿನ ಮೊತ್ತವು ಸ್ವಯಂಚಾಲಿತವಾಗಿ ವರ್ಗಾವಣೆಯಾಗುವುದನ್ನು ‘ಇಪಿಎಫ್‌ಒ’ ಸದ್ಯಕ್ಕೆ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದೆ. ಎಲ್ಲ ಸದಸ್ಯರಿಗೆ ಇದನ್ನು ಮುಂದಿನ ಹಣಕಾಸು ವರ್ಷದಲ್ಲಿ ವಿಸ್ತರಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !