ನವದೆಹಲಿ: ಗ್ರೀಕ್ ಯೋಗರ್ಟ್ ಬ್ರ್ಯಾಂಡ್ ಆದ ಎಪಿಗಾಮಿಯಾ ಸಂಸ್ಥಾಪಕ ರೋಹನ್ ಮಿರ್ಚಂದಾನಿ (42) ಅವರು, ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂದು ಡ್ರಮ್ಸ್ ಫುಡ್ ಇಂಟರ್ನ್ಯಾಷನಲ್ ಕಂಪನಿ ತಿಳಿಸಿದೆ.

ಡ್ರಮ್ಸ್ ಫುಡ್ ಇಂಟರ್ನ್ಯಾಷನಲ್ ಕಂಪನಿಯ ಸಹ ಸಂಸ್ಥಾಪಕ ಕೂಡ ಆಗಿರುವ ರೋಹನ್ ಅವರಿಗೆ ಶನಿವಾರ ಹೃದಯ ಸ್ತಂಭನವಾಗಿತ್ತು. ಹೃದಯದ ಬಡಿತ ಸ್ತಬ್ಧವಾಗಿ ರಕ್ತದ ಚಲನೆ ಸಂಪೂರ್ಣ ನಿಂತು ಹೋಗಿದ್ದರಿಂದ ಅವರು ನಿಧನರಾಗಿದ್ದಾರೆ ಎಂದು ಹೇಳಿದೆ.

‘ರೋಹನ್ ಅವರ ನಿಧನದಿಂದ ಎಪಿಗಾಮಿಯಾ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ. ಅವರು ನಮ್ಮೆಲ್ಲರ ಮಾರ್ಗದರ್ಶಕ, ಸ್ನೇಹಿತ ಹಾಗೂ ನಾಯಕನಾಗಿದ್ದರು. ಅವರ ಕನಸನ್ನು ಮುಂದುವರಿಸಿಕೊಂಡು ಹೋಗುವ ಗುರಿ ಹೊಂದಿದ್ದೇವೆ’ ಎಂದು ಎಪಿಗಾಮಿಯಾ ಸಿಒಒ ಮತ್ತು ಸಂಸ್ಥಾಪಕ ಸದಸ್ಯ ಅಂಕುರ್ ಗೋಯೆಲ್ ಹಾಗೂ ನಿರ್ದೇಶಕ ಉದಯ್ ಠಾಕ್ಕರ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಪಿಗಾಮಿಯಾ ಬ್ರ್ಯಾಂಡ್ನಡಿ ಸುವಾಸನೆ ಭರಿತ ರುಚಿಕರ ಹಾಗೂ ಆರೋಗ್ಯಕರ ಯೋಗರ್ಟ್ಗಳು, ಸಸ್ಯಾಧಾರಿತ ಪದಾರ್ಥಗಳು, ಪಾನೀಯಗಳು ಮತ್ತು ತಿನಿಸುಗಳನ್ನು ತಯಾರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.