ನವದೆಹಲಿ: ಏಪ್ರಿಲ್ನಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ನಲ್ಲಿ ₹24,269 ಕೋಟಿ ಹೂಡಿಕೆಯಾಗಿದೆ. ಮಾರ್ಚ್ನಲ್ಲಿ ₹25,082 ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಹೂಡಿಕೆ ಪ್ರಮಾಣದಲ್ಲಿ ಶೇ 3.24ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್ಐ) ತಿಳಿಸಿದೆ.

ಸತತ ನಾಲ್ಕು ತಿಂಗಳಿನಿಂದ ಈಕ್ವಿಟಿ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಡೆಟ್ ಮತ್ತು ಹೈಬ್ರೀಡ್ ಫಂಡ್ಗಳತ್ತ ಹೂಡಿಕೆದಾರರ ಚಿತ್ತ ನೆಟ್ಟಿರುವುದೇ ಇದಕ್ಕೆ ಕಾರಣ ಎಂದು ಹೇಳಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದಿಂದ ದೇಶೀಯ ಷೇರುಪೇಟೆಯು ಏರಿಳಿತ ಕಾಣುತ್ತಿದೆ. ಅಲ್ಲದೆ, ಅಮೆರಿಕದ ಸುಂಕ ನೀತಿಯು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದು ಕೂಡ ಹೂಡಿಕೆ ಇಳಿಕೆಗೆ ಕಾರಣವಾಗಿದೆ ಎಂದು ಹೇಳಿದೆ.

ಈ ಬೆಳವಣಿಗೆ ಹೊರತಾಗಿಯೂ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ಮೂಲಕ ಹೂಡಿಕೆ ಪ್ರಮಾಣವು ಹೆಚ್ಚಾಗುತ್ತಿದೆ. ಮಾರ್ಚ್ನಲ್ಲಿ ಎಸ್ಐಪಿ ಮೂಲಕ ₹25,926 ಕೋಟಿ ಹೂಡಿಕೆಯಾಗಿದ್ದರೆ, ಏಪ್ರಿಲ್ನಲ್ಲಿ ₹26,632 ಕೋಟಿ ಹೂಡಿಕೆಯಾಗಿದೆ.

ಏಪ್ರಿಲ್ ಅಂತ್ಯಕ್ಕೆ ಮ್ಯೂಚುವಲ್ ಫಂಡ್ ಉದ್ಯಮದ ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹70 ಲಕ್ಷ ಕೋಟಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.