ಗುರುವಾರ , ಸೆಪ್ಟೆಂಬರ್ 23, 2021
20 °C

ಈಕ್ವಿಟಿ ಎಂಎಫ್‌: ₹ 8,666 ಕೋಟಿ ಒಳಹರಿವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈಕ್ವಿಟಿ ಮ್ಯೂಚುವಲ್‌ ಫಂಡ್‌ ಯೋಜನೆಗಳು ಆಗಸ್ಟ್‌ನಲ್ಲಿ ₹ 8,666 ಕೋಟಿ ಬಂಡವಾಳ ಆಕರ್ಷಿಸಿವೆ. ಸತತ ಆರನೇ ತಿಂಗಳಿನಲ್ಲಿಯೂ ಬಂಡವಾಳ ಒಳಹರಿವು ಆದಂತಾಗಿದೆ.

ಒಟ್ಟಾರೆ ಹೂಡಿಕೆಯಲ್ಲಿ ಫ್ಲೆಕ್ಸಿ ಕ್ಯಾಪ್‌ಗಳಲ್ಲಿ ಆಗಿರುವ ಪ್ರಮಾಣವು ಹೆಚ್ಚಿಗೆ ಇದೆ. ಜುಲೈನಲ್ಲಿ ಈ ಯೋಜನೆಗಳಲ್ಲಿ ₹ 22,583 ಕೋಟಿ ಹೂಡಿಕೆ ಅಗಿತ್ತು ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ ಮಾಹಿತಿ ನೀಡಿದೆ.

ಈಕ್ವಿಟಿ ಮ್ಯೂಚುವಲ್ ಫಂಡ್‌ ಯೋಜನೆಗಳಲ್ಲಿ ಮಾರ್ಚ್‌ನಲ್ಲಿ ₹ 9,115 ಕೋಟಿ, ಏಪ್ರಿಲ್‌ನಲ್ಲಿ ₹ 3,437 ಕೋಟಿ, ಮೇನಲ್ಲಿ ₹ 10,083 ಕೋಟಿ ಹಾಗೂ ಜೂನ್‌ನಲ್ಲಿ ₹ 5,988 ಕೋಟಿ ಹೂಡಿಕೆ ಆಗಿತ್ತು. 2020ರ ಜುಲೈನಿಂದ 2021ರ ಫೆಬ್ರುವರಿವರೆಗಿನ ಅವಧಿಗಳಲ್ಲಿ ಬಂಡವಾಳ ಹೊರಹರಿವು ಕಂಡುಬಂದಿತ್ತು.

ಮ್ಯೂಚುವಲ್‌ ಫಂಡ್‌ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ಆಗಸ್ಟ್‌ ಅಂತ್ಯಕ್ಕೆ ₹ 36.6 ಲಕ್ಷ ಕೋಟಿ ಆಗಿದೆ. ಜುಲೈ ತಿಂಗಳ ಅಂತ್ಯದಲ್ಲಿ ₹ 35.32 ಲಕ್ಷ ಕೋಟಿ ಇತ್ತು.

ಹೂಡಿಕೆದಾರರು ಹೈಬ್ರಿಡ್‌ ಫಂಡ್‌ಗಳಲ್ಲಿ ಆಗಸ್ಟ್‌ನಲ್ಲಿ ₹ 18,706 ಕೋಟಿ ಹೂಡಿಕೆ ಮಾಡಿದ್ದಾರೆ. ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ₹ 24 ಕೋಟಿ ಹೂಡಿಕೆ ಆಗಿದೆ. ಅದೇ ರೀತಿ ಡೆಟ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ₹ 1,074 ಕೋಟಿ ಬಂಡವಾಳ ಹೂಡಿಕೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು