ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಲ್ಲಿ ರಫ್ತು ವಹಿವಾಟು ಮೂರುಪಟ್ಟು ಹೆಚ್ಚಳ

Last Updated 2 ಮೇ 2021, 14:09 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಫ್ತು ವಹಿವಾಟು ಏಪ್ರಿಲ್‌ನಲ್ಲಿ ಮೂರುಪಟ್ಟು ಹೆಚ್ಚಾಗಿದ್ದು ₹ 2.23 ಲಕ್ಷ ಕೋಟಿಗೆ ತಲುಪಿದೆ. ಕೇಂದ್ರ ವಾಣಿಜ್ಯ ಸಚಿವಾಲಯವು ಭಾನುವಾರ ಈ ಮಾಹಿತಿ ಬಿಡುಗಡೆ ಮಾಡಿದೆ.

ಎಂಜಿನಿಯರಿಂಗ್‌, ಹರಳು, ಚಿನ್ನಾಭರಣ ಮತ್ತು ಪೆಟ್ರೋಲಿಯಂ ಉತ್ಪನ್ನ ವಲಯಗಳ ಉತ್ತಮ ಬೆಳವಣಿಗೆಯಿಂದ ರಫ್ತು ವಹಿವಾಟು ಈ ಪ್ರಮಾಣದ ಹೆಚ್ಚಳ ಕಂಡಿದೆ. 2020ರ ಏಪ್ರಿಲ್‌ನಲ್ಲಿ ರಫ್ತು ವಹಿವಾಟಿನ ಮೌಲ್ಯ ₹ 75,258 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ 2021ರ ಏಪ್ರಿಲ್‌ನಲ್ಲಿ ಆಗಿರುವ ರಫ್ತು ವಹಿವಾಟಿನ ಮೌಲ್ಯವು ಶೇಕಡ 197ರಷ್ಟು ಏರಿಕೆ ಕಂಡಿದೆ.

ವ್ಯಾಪಾರ ಕೊರತೆ ಅಂತರವು 2020ರ ಏಪ್ರಿಲ್‌ನಲ್ಲಿ ₹ 51,208 ಕೋಟಿ ಆಗಿತ್ತು. 2021ರ ಏಪ್ರಿಲ್‌ನಲ್ಲಿ ಇದು ₹ 1.12 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಆಮದು ವಹಿವಾಟು ಸಹ ಮೂರು ಪಟ್ಟು ಏರಿಕೆ ಆಗಿದ್ದು, ₹ 3.36 ಲಕ್ಷ ಕೋಟಿ ಆಗಿದೆ. 2020ರ ಏಪ್ರಿಲ್‌ನಲ್ಲಿ ಇದು ₹ 1.26 ಲಕ್ಷ ಕೋಟಿಯಷ್ಟಿತ್ತು.

ಕೋವಿಡ್‌–19 ಸಾಂಕ್ರಾಮಿಕ ನಿಯಂತ್ರಿಸಲು ಲಾಕ್‌ಡೌನ್‌ ಹೇರಿದ್ದರಿಂದ 2020ರ ಏಪ್ರಿಲ್‌ನಲ್ಲಿ ರಫ್ತು ವಹಿವಾಟು ಶೇ 60.28ರಷ್ಟು ಕುಸಿತ ಕಂಡಿತ್ತು. 2021ರ ಮಾರ್ಚ್‌ನಲ್ಲಿ ರಫ್ತು ವಹಿವಾಟು ಶೇ 60.29ರಷ್ಟು ಏರಿಕೆ ಆಗಿದೆ.

ಚಿನ್ನದ ಆಮದು ₹ 20,942 ಕೋಟಿಯಿಂದ ₹ 45,288 ಕೋಟಿಗೆ ಏರಿಕೆಯಾಗಿದೆ. ತೈಲ ಆಮದು ₹ 34,410 ಕೋಟಿಯಿಂದ ₹ 79,920 ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT