ಶುಕ್ರವಾರ, ಏಪ್ರಿಲ್ 23, 2021
32 °C

₹ 21.46 ಲಕ್ಷ ಕೋಟಿ ಮೌಲ್ಯದ ರಫ್ತು ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದ ರಫ್ತು ವಹಿವಾಟಿನ ಮೇಲೆ ಹೆಚ್ಚಿನ ಹಾನಿ ಆಗಿದೆ. ಹೀಗಾಗಿ ಈ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ ದೇಶದ ರಫ್ತು ವಹಿವಾಟು ₹ 21.46 ಲಕ್ಷ ಕೋಟಿಗಳಷ್ಟು ಇರುವ ಅಂದಾಜು ಮಾಡಲಾಗಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ಹೇಳಿದೆ.

2021ನೇ ವರ್ಷವು ರಫ್ತು ಸಮುದಾಯದಲ್ಲಿ ಹೊಸ ಭರವಸೆ ಮತ್ತು ಆಶಾವಾದದ ಮೂಡಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಶರದ್‌ ಕುಮಾರ್‌ ಸರಫ್‌ ಹೇಳಿದ್ದಾರೆ.

‘ಜಾಗತಿಕ ವ್ಯಾಪಾರವು ಚೇತರಿಕೆ ಕಾಣುವ ವಿಶ್ವಾಸವಿದೆ. 2020ರಲ್ಲಿ ನಾವು ಕಳೆದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಚೇತರಿಕೆ ಕಂಡುಕೊಳ್ಳಲಿದ್ದೇವೆ. ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು, ಹೀಗಾಗಿ 2020–21ನೇ ಹಣಕಾಸು ವರ್ಷದಲ್ಲಿ ರಫ್ತು ವಹಿವಾಟು ₹ 21.46 ಲಕ್ಷ ಕೋಟಿಗಳಿಗೆ ತಲುಪುವ ಅಂದಾಜು ಮಾಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸ್ಕರಿಸಿದ ಆಹಾರ, ಔಷಧ, ವೈದ್ಯಕೀಯ ಮತ್ತು ಡಯಾಗ್ನಾಸ್ಟಿಕ್‌ ಉತ್ಪನ್ನಗಳು, ರಾಸಾಯನಿಕ, ಪ್ಲಾಸ್ಟಿಕ್‌, ಎಲೆಕ್ಟ್ರಾನಿಕ್ಸ್‌ ಮತ್ತು ನೆಟ್‌ವರ್ಕಿಂಗ್‌ ಸಾಧನಗಳಿಗೆ ಉತ್ತಮ ಬೇಡಿಕೆ ಬರುವ ನಿರೀಕ್ಷೆ ಇದೆ. 2021–22ರಲ್ಲಿ ರಫ್ತು ವಹಿವಾಟನ್ನು ₹ 25.90 ಲಕ್ಷ ಕೋಟಿಗೆ ತಲುಪಿಸುವ ಪ್ರಯತ್ನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

2020–21ರ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ರಫ್ತು ವಹಿವಾಟು ಶೇ 17.8ರಷ್ಟು ಇಳಿಕೆ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು