ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಂಟಿ, ಉಚಿತ ಸೇವಾ ಅವಧಿ ವಿಸ್ತರಿಸಿದ ಟಾಟಾ, ಮಾರುತಿ, ಟೊಯೋಟ

Last Updated 12 ಮೇ 2021, 17:00 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ವಾಹನಗಳ ವಾರಂಟಿ, ಉಚಿತ ಸೇವೆಗಳ ಅವಧಿಯನ್ನು ವಿಸ್ತರಿಸಿವೆ.

ಕೋವಿಡ್‌–19 ನಿಯಂತ್ರಿಸಲು ನಿರ್ಬಂಧಗಳನ್ನು ವಿಧಿಸಿರುವ ರಾಜ್ಯಗಳಲ್ಲಿ ವಾಹನದ ವಾರಂಟಿ ಮತ್ತು ವಿಸ್ತರಿತ ವಾರಂಟಿ ಅವಧಿಯನ್ನು ಒಂದು ತಿಂಗಳವರೆಗೆ ಹೆಚ್ಚಿಸಿರುವುದಾಗಿ ಟೊಯೋಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ಬುಧವಾರ ಹೇಳಿದೆ.

ಕಂಪನಿಯು ತನ್ನ ಗ್ರಾಹಕರ ಜೊತೆ ಸಂಪರ್ಕ ಯೋಜನೆ ಅಡಿಯಲ್ಲಿ ಪ್ರಿಪೇಯ್ಡ್‌ ಸೇವಾ ಪ್ಯಾಕೇಜ್‌ಗಳು ಮತ್ತು ಇತರೆ ಸೇವೆಗಳ ಅವಧಿಯನ್ನೂ ವಿಸ್ತರಿಸಿರುವುದಾಗಿ ತಿಳಿಸಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಉಚಿತ ಸೇವೆಗಳು ಮತ್ತು ವಾರಂಟಿ ಅವಧಿಯನ್ನು ಜೂನ್‌ 30ರವರೆಗೂ ವಿಸ್ತರಿಸಿರುವುದಾಗಿ ತಿಳಿಸಿದೆ. 2021ರ ಮಾರ್ಚ್‌ 15ರಿಂದ ಮೇ 31ರ ಅವಧಿಯ ಒಳಗಡೆ ಉಚಿತ ಸೇವೆ ಮತ್ತು ವಾರಂಟಿ ಮುಗಿಯುವುದಿದ್ದರೆ, ಅಂತಹ ವಾಹನಗಳಿಗೆ ಮಾತ್ರವೇ ಇದು ಅನ್ವಯ ಆಗಲಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.

ಟಾಟಾ ಮೋಟರ್ಸ್‌ ಸಹ ದೇಶದಾದ್ಯಂತ ಏಪ್ರಿಲ್‌ 1ರಿಂದ ಮೇ 31ರ ಒಳಗೆ ಮುಗಿಯಲಿರುವ ಎಕ್ಸ್‌ಟೆಂಡೆಡ್‌ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಜೂನ್‌ 30ರವರೆಗೆ ವಿಸ್ತರಿಸಿದೆ.

ಎಂಜಿ ಮೋಟರ್‌ ಇಂಡಿಯಾ ಸಹ ಏಪ್ರಿಲ್‌ ಮತ್ತು ಮೇ ತಿಂಗಳ ಎಕ್ಸ್‌ಟೆಂಡೆಡ್‌ ವಾರಂಟಿ ಮತ್ತು ಸೇವೆಗಳ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT