ಗುರುವಾರ, 18 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಶತ್ರುಗಳ ಬಾಧೆ ದೂರವಾಗಿ ಯೋಜನೆಗಳು ಈಡೇರಲಿವೆ
Published 18 ಡಿಸೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅವಕಾಶಗಳ ಬಗ್ಗೆ ಯೋಚಿಸಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಏಜೆನ್ಸಿಯಂತಹ ಉದ್ಯೋಗ ತೆರೆಯಲು ಸೂಕ್ತ ಸ್ಥಳಾವಕಾಶ ಹುಡುಕಾಟದ ಕೆಲಸ ಆರಂಭಿಸುವಿರಿ.
ವೃಷಭ
ದೇಹದಲ್ಲಿ ಉತ್ಸಾಹವಿರುವುದರಿಂದ ಯಶಸ್ಸು ದೊರೆಯುವುದು. ಇನ್ನೊಬ್ಬರಿಗೆ ಬೆಲೆ ಕೊಟ್ಟು ನೀವು ಬೆಲೆ ಸಂಪಾದಿಸಿಕೊಳ್ಳುವುದನ್ನು ಅಭ್ಯಾಸಿಸಿ. ಶತ್ರುಗಳ ಬಾಧೆ ದೂರಾಗಿ ಯೋಜನೆಗಳು ಈಡೇರಲಿವೆ.
ಮಿಥುನ
ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯವನ್ನು ಸೂಕ್ತ ರೀತಿಯಲ್ಲಿ ಮಾಡಿಕೊಳ್ಳಿ. ಸಂಘ ಸಂಸ್ಥೆಗಳಲ್ಲಿ ಅಧಿಕಾರ ಹೊರುವ ಸಂದರ್ಭವು ಬಂದಲ್ಲಿ, ಹಿಂದೆ ಸರಿಯುವುದು ಉತ್ತಮ. ರಕ್ತದೊತ್ತಡವು ನಿಯಂತ್ರಣಕ್ಕೆ ಬರುವುದು.
ಕರ್ಕಾಟಕ
ದವಸ ಧಾನ್ಯ ಹಾಗೂ ಮಸಾಲಾ ಸಾಮಗ್ರಿಗಳ ಸಗಟು ಹಾಗೂ ರಫ್ತು ವ್ಯಾಪಾರಿಗಳಿಗೆ ಅನುಕೂಲವಾಗುವುದು. ಮನೆಯಲ್ಲಿ ದುರ್ಗಾ ಸ್ತೋತ್ರ ಪಠಿಸಿದರೆ ಯಶಸ್ಸು ದೊರೆಯುವುದು.
ಸಿಂಹ
ಹೆಚ್ಚಿನ ಆತ್ಮಸ್ಥೈರ್ಯದಿಂದ ಕೆಲಸವನ್ನು ಪ್ರಾರಂಭಿಸಿದರೂ ಜಯ ಕಾಣುವಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ತೋರಿದಷ್ಟೂ ಸುಖ-ಶಾಂತಿ ಹೆಚ್ಚುವುದು. ಸ್ಪರ್ಧಾ ಮನೋಭಾವ ತೀವ್ರಗೊಳ್ಳುವುದು.
ಕನ್ಯಾ
ವೈಯಕ್ತಿಕ ಕೆಲಸಗಳಿಗೆ ಮೇಲಧಿಕಾರಿಗಳಿಂದ ಅಡಚಣೆ ಇರುವುದಿಲ್ಲ. ಹಿರಿಯರ ಆಶೀರ್ವಾದದಿಂದ ಕಾರ್ಯಗಳಲ್ಲಿ ಜಯ ಹೊಂದುವಿರಿ. ಗೆಳೆಯರೊಂದಿಗೆ ಪ್ರವಾಸ ಹೋಗಲು ದಿನ ನಿಶ್ಚಿತವಾಗುವುದು.
ತುಲಾ
ಕೀಳರಿಮೆ, ಹಿಂಜರಿಕೆಯ ಸ್ವಭಾವ ಅಥವಾ ಅಹಂಕಾರದ ನಡವಳಿಕೆ ಯನ್ನು ಬಿಟ್ಟು ಕಾರ್ಯ ಕೈಗೊಳ್ಳಲು ಮುಂದಾಗಿ, ಗೆಲುವು ನಿಮ್ಮದಾಗುತ್ತದೆ. ವಿದೇಶಿ ವಸ್ತುಗಳ ಖರೀದಿಗಾಗಿ ಅಧಿಕ ಮಟ್ಟದಲ್ಲಿ ಧನವ್ಯಯ ಮಾಡುವಿರಿ.
ವೃಶ್ಚಿಕ
ಮನೆಯ ದಾಖಲೆ ಪತ್ರಗಳನ್ನು, ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವ ಕಾರ್ಯದ ಬಗ್ಗೆ ಯೋಚನೆ ಮಾಡಿ. ಪೊಲೀಸ್‌ ವೃತ್ತಿಯಲ್ಲಿರುವವರಿಗೆ ಸಂಚಾರ ಕಂಡುಬರಲಿದೆ.
ಧನು
ಮಾನಸಿಕ ನೆಮ್ಮದಿಗಾಗಿ ಧಾರ್ಮಿಕ ಕಾರ್ಯಗಳನ್ನು ಅಥವಾ ಪುಣ್ಯಕ್ಷೇತ್ರಗಳ ದರ್ಶನ ಮಾಡಲಿರುವಿರಿ. ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅವಕಾಶಗಳು ಸಿಗಲಿವೆ.
ಮಕರ
ಅತಿಯಾದ ಔದಾರ್ಯತನ ತೋರಬೇಕೆನಿಸಿದಲ್ಲಿ ಹಣಕಾಸಿನ ಸ್ಥಿತಿಯನ್ನು ಗಮನಿಸಿಕೊಳ್ಳಿರಿ. ಸಂಗೀತದಲ್ಲಿ ಪರಿಣತಿ ಹೊಂದಿರುವವರಿಗೆ ಅವಕಾಶಗಳು ಅರಸಿ ಬರಲಿವೆ.
ಕುಂಭ
ಕಲೆ, ಆಲಂಕಾರಿಕ ಹಾಗೂ ವೈಭೋಗ ವಸ್ತುಗಳಿಂದ ಲಾಭಾಂಶವನ್ನು ನಿರೀಕ್ಷಿಸಬಹುದು. ಪರಿಸ್ಥಿತಿಯನ್ನು ಬುದ್ಧಿವಂತಿಕೆ ಮತ್ತು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು.
ಮೀನ
ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಾದರೂ ಮೂಲಧನಕ್ಕೆ ಮೋಸವಾಗುವುದಿಲ್ಲ. ರಾಜಕೀಯ ವಿದ್ಯಮಾನಗಳಿಂದಾಗಿ ಓಡಾಟ ಆಧಿಕಗೊಳ್ಳುವುದು. ಶ್ರಮದ ಬದುಕಿನಿಂದ ಹೊಸ ಘಟ್ಟವನ್ನು ತಲುಪುವಂತಾಗಲಿದೆ.
ADVERTISEMENT
ADVERTISEMENT