ಬೆಂಗಳೂರು: ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಆಯೋಜಿಸಿರುವ, ಟೈಟಲ್ ಪಾರ್ಟ್ನರ್ ಆಗಿ ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಹಾಗೂ ಪವರ್ಡ್ ಪಾರ್ಟ್ನರ್ ಆಗಿ ಸ್ಪೈಸ್ಜೆಟ್ ಹೊಂದಿರುವ ವರ್ಲ್ಡ್ ಟೆನಿಸ್ ಲೀಗ್, ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ಮತ್ತೊಂದು ರೋಚಕ ದಿನಕ್ಕೆ ಸಾಕ್ಷಿಯಾಯಿತು.

ದಿನದ ಮೊದಲ ಪಂದ್ಯದಲ್ಲಿ AOS ಈಗಲ್ಸ್ ಹಾಗೂ ಆಸ್ಸಿ ಮೇವರಿಕ್ಸ್ ಕೈಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸುಮಿತ್ ನಗಾಲ್ ಮತ್ತು ಧಕ್ಷಿಣೇಶ್ವರ ಸುರೇಶ್ ಕಣಕ್ಕಿಳಿದರು. ಕೌಂಟರ್-ಪಂಚರ್ ಆಗಿರುವ ನಗಾಲ್ ಎದುರು, 6 ಅಡಿ 5 ಇಂಚು ಎತ್ತರದ ಸುರೇಶ್ ತಮ್ಮ ಶಕ್ತಿಯುತ ಸರ್ವ್ ಹಾಗೂ ಆಕ್ರಮಣಕಾರಿ ಆಟದಿಂದ ಗಮನ ಸೆಳೆದರು.

ಇಬ್ಬರ ನಡುವಿನ ಪೈಪೋಟಿ ಟೂರ್ನಿಯ ಮೊದಲ ಟೈಬ್ರೇಕ್ಗೆ ದಾರಿ ಮಾಡಿಕೊಟ್ಟಿತು. ಟೈಬ್ರೇಕ್ನಲ್ಲಿ ಅಂಕಗಳು 6-6 ಸಮವಾಗುತ್ತಿದ್ದಂತೆ, WTLನ ನಿರ್ಣಾಯಕ ‘ಗೋಲ್ಡನ್ ಪಾಯಿಂಟ್’ ನಿಯಮ ಅನ್ವಯವಾಯಿತು. ಆ ಮಹತ್ವದ ಅಂಕವನ್ನು ನಗಾಲ್ ಗೆದ್ದು ಪಂದ್ಯ ಹಾಗೂ ಸೆಟ್ ತಮ್ಮದಾಗಿಸಿಕೊಂಡರು. ಇದರೊಂದಿಗೆ AOS ಈಗಲ್ಸ್ ತಂಡವು 25-13 ಅಂಕಗಳ ಭರ್ಜರಿ ಜಯ ಸಾಧಿಸಿತು.

ಮಹಿಳಾ ಸಿಂಗಲ್ಸ್ನಲ್ಲಿ ಪೌಲಾ ಬಡೋಸಾ, ಮಾರ್ಟಾ ಕೋಸ್ಟ್ಯುಕ್ ವಿರುದ್ಧ 6-1 ಅಂತರದ ಗೆಲುವು ಸಾಧಿಸಿ ಈಗಲ್ಸ್ ತಂಡಕ್ಕೆ ಬಲವಾದ ಆರಂಭ ಒದಗಿಸಿದರು. 2025 ಆಸ್ಟ್ರೇಲಿಯನ್ ಓಪನ್ ಸೆಮಿಫೈನಲಿಸ್ಟ್ ಆಗಿರುವ ಬಡೋಸಾ, ಸೀಸನ್ನ ಎರಡನೇ ಅರ್ಧದಲ್ಲಿ ಗಾಯಗೊಂಡಿದ್ದರೂ, ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು.

ಮಿಶ್ರ ಡಬಲ್ಸ್ನಲ್ಲಿ ಪೌಲಾ ಬಡೋಸಾ–ಗೇಲ್ ಮೊನ್ಫಿಲ್ಸ್ ಜೋಡಿ, ಧಕ್ಷಿಣೇಶ್ವರ ಸುರೇಶ್–ಮಾರ್ಟಾ ಕೋಸ್ಟ್ಯುಕ್ ಜೋಡಿಯನ್ನು 6-3 ಅಂತರದಿಂದ ಮಣಿಸಿತು. ಪುರುಷರ ಡಬಲ್ಸ್ನಲ್ಲಿ ಮೊನ್ಫಿಲ್ಸ್–ನಗಾಲ್ ಜೋಡಿ, ಸುರೇಶ್–ನಿಕ್ ಕಿರ್ಗಿಯೊಸ್ ಜೋಡಿಯನ್ನು 6-3 ಅಂತರದಿಂದ ಸೋಲಿಸಿತು.

ನಾಲ್ಕನೇ ಸೀಸನ್ಗೆ ಕಾಲಿಟ್ಟಿರುವ ವರ್ಲ್ಡ್ ಟೆನಿಸ್ ಲೀಗ್, ಭಾರತೀಯ ಅಭಿಮಾನಿಗಳಿಗೆ ವಿಶ್ವದ ಅಗ್ರ ತಾರೆಯರನ್ನು ಸಮೀಪದಿಂದ ನೋಡುವ ಅಪೂರ್ವ ಅವಕಾಶ ಒದಗಿಸಿದೆ. ಆಸ್ಟ್ರೇಲಿಯಾದ ಮೇವರಿಕ್ ನಿಕ್ ಕಿರ್ಗಿಯೊಸ್ ಸಂಪೂರ್ಣ ತಂಡ ಆಟಗಾರನಾಗಿ ಈ ಬಾರಿ ಕಾಣಿಸಿಕೊಂಡಿದ್ದಾರೆ.

ಈ ವರ್ಷ ನಾಲ್ಕು ಫ್ರಾಂಚೈಸಿಗಳು ಸ್ಪರ್ಧಿಸುತ್ತಿದ್ದು, ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ಒಮ್ಮೆ ಮುಖಾಮುಖಿಯಾಗಲಿವೆ. ಅಗ್ರ ಎರಡು ತಂಡಗಳು ಫೈನಲ್ಗೆ ಅರ್ಹತೆ ಪಡೆಯಲಿವೆ.

ಪ್ರತಿ ಟೈನಲ್ಲಿ ನಾಲ್ಕು ಸೆಟ್ಗಳು ನಡೆಯಲಿದ್ದು, ಪುರುಷರ ಸಿಂಗಲ್ಸ್, ಮಹಿಳಾ ಸಿಂಗಲ್ಸ್, ಪುರುಷರ ಡಬಲ್ಸ್ ಹಾಗೂ ಮಹಿಳಾ/ಮಿಕ್ಸ್ಡ್ ಡಬಲ್ಸ್ ಪಂದ್ಯಗಳು ನಡೆಯಲಿವೆ. ಗೆದ್ದ ಆಟಗಳ ಸಂಖ್ಯೆಯ ಆಧಾರದಲ್ಲಿ ಫಲಿತಾಂಶ ನಿರ್ಧಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.