ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕೂಲ ಹವಾಮಾನದಿಂದ ಹಣದುಬ್ಬರ ಏರಿಕೆ ಸಾಧ್ಯತೆ: ಆರ್‌ಬಿಐ

Published 23 ಏಪ್ರಿಲ್ 2024, 14:14 IST
Last Updated 23 ಏಪ್ರಿಲ್ 2024, 14:14 IST
ಅಕ್ಷರ ಗಾತ್ರ

ಮುಂಬೈ: ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಪ್ರತಿಕೂಲ ಹವಾಮಾನವು ದೇಶದಲ್ಲಿ ಹಣದುಬ್ಬರದ ಏರಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಸಿಕ ವರದಿ ತಿಳಿಸಿದೆ.

ಬಿಸಿ ಗಾಳಿಯು ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಲಿದೆ. ಮತ್ತೊಂದೆಡೆ ಇಸ್ರೇಲ್‌–ಇರಾನ್‌ ನಡುವಿನ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅಸ್ಥಿರವಾಗಿದೆ. ತೈಲದ ಬೆಲೆ ಏರಿಕೆಯಾದರೆ ಹಣದುಬ್ಬರವು ಹೆಚ್ಚಳವಾಗಲಿದೆ ಎಂದು ಹೇಳಿದೆ.   

ಮಾರ್ಚ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರವು ಶೇ 4.9ರಷ್ಟು ದಾಖಲಾಗಿದೆ. ಕಳೆದ ಎರಡು ತಿಂಗಳಿನಿಂದಲೂ ಸರಾಸರಿ ಹಣದುಬ್ಬರವು ಶೇ 5.1ರಷ್ಟಿದೆ.

ಜಾಗತಿಕ ಬೆಳವಣಿಗೆಯ ವೇಗವು ಸುಸ್ಥಿರವಾಗಿದ್ದು, ವ್ಯಾಪಾರ ವಹಿವಾಟು ಸಕಾರಾತ್ಮಕವಾಗಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT