ನವದೆಹಲಿ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ರಸಗೊಬ್ಬರ ಆಮದು 2.23 ಕೋಟಿ ಟನ್ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಭಾರತೀಯ ರಸಗೊಬ್ಬರ ಸಂಘ (ಎಫ್ಎಐ) ಮಂಗಳವಾರ ತಿಳಿಸಿದೆ.

ಇದು ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 41ರಷ್ಟು ಹೆಚ್ಚಳ ಎಂದು ತಿಳಿಸಿದೆ. ದೇಶದಲ್ಲಿ ಸುರಿದ ಉತ್ತಮ ಮುಂಗಾರು, ಬೇಡಿಕೆ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.

ಭಾರತವು ಜಗತ್ತಿನಲ್ಲಿ ಅತಿಹೆಚ್ಚು ರಸಗೊಬ್ಬರ ಬಳಸುವ ದೇಶಗಳ ಪೈಕಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ದೇಶದಲ್ಲಿ 1.44 ಕೋಟಿ ಟನ್ನಷ್ಟು ರಸಗೊಬ್ಬರ ಆಮದಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 85.6 ಲಕ್ಷ ಟನ್ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಆಮದು ಪ್ರಮಾಣ ಈ ಅವಧಿಯಲ್ಲಿ ಶೇ 69ರಷ್ಟು ಹೆಚ್ಚಳವಾಗಿದೆ.

‘ದೇಶದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ರಸಗೊಬ್ಬರದ ಆಮದು ಪ್ರಮಾಣ ಹೆಚ್ಚಳವಾಗಿದೆ’ ಎಂದು ಎಫ್ಎಐ ಅಧ್ಯಕ್ಷ ಎಸ್. ಶಂಕರ್ಸುಬ್ರಮಣಿಯನ್ ಹೇಳಿದ್ದಾರೆ.

ನವೆಂಬರ್ ಅಂತ್ಯದ ವೇಳೆಗೆ ರಸಗೊಬ್ಬರ ದಾಸ್ತಾನು 1.02 ಕೋಟಿ ಟನ್ನಷ್ಟಿದೆ. ಈ ದಾಸ್ತಾನಿನಲ್ಲಿ 50 ಲಕ್ಷ ಟನ್ ಯೂರಿಯಾ, 17 ಲಕ್ಷ ಟನ್ ಡಿಎಪಿ ಮತ್ತು 35 ಲಕ್ಷ ಟನ್ ಎನ್ಪಿಕೆ ರಸಗೊಬ್ಬರ ಸೇರಿದೆ ಎಂದು ಹೇಳಿದ್ದಾರೆ.

ಕೋರಮಂಡಲ್ ಇಂಟರ್ನ್ಯಾಷನಲ್ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಶಂಕರ್ಸುಬ್ರಮಣಿಯನ್ ಅವರು, ಕಳೆದ ಎರಡು ತಿಂಗಳಿನಲ್ಲಿ ಭಾರತವು ದೊಡ್ಡ ಪ್ರಮಾಣದಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಯಾವುದೇ ಪೂರೈಕೆ ನಿರ್ಬಂಧಗಳಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಕಳೆದ ಏಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ 2.97 ಕೋಟಿ ಟನ್ನಷ್ಟಿತ್ತು. ಅದು ಈ ಬಾರಿ 2.99 ಕೋಟಿ ಟನ್ಗೆ ಹೆಚ್ಚಳವಾಗಿದೆ.

ಈ ಪೈಕಿ 1.71 ಕೋಟಿ ಟನ್ ಯೂರಿಯಾ, 23.2 ಲಕ್ಷ ಟನ್ ಡಿಎಪಿ, 70.4 ಲಕ್ಷ ಟನ್ ಎನ್ಪಿಕೆ ರಸಗೊಬ್ಬರ ಮತ್ತು 34.8 ಲಕ್ಷ ಟನ್ ಎಸ್ಎಸ್ಪಿ ಇದೆ. ವಾರ್ಷಿಕವಾಗಿ ದೇಶದಲ್ಲಿ 7 ಕೋಟಿ ಟನ್ನಷ್ಟು ರಸಗೊಬ್ಬರ ಬಳಕೆ ಆಗುತ್ತದೆ.

2024–25ರಲ್ಲಿ ಯೂರಿಯಾ ಮತ್ತು ಪೋಷಕಾಂಶ ಆಧಾರಿತ ರಸಗೊಬ್ಬರಕ್ಕೆ ₹1.9 ಲಕ್ಷ ಕೋಟಿಗೂ ಹೆಚ್ಚು ಸಬ್ಸಿಡಿಯನ್ನು ಸರ್ಕಾರ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.