ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ ಶೇಕಡ 12.73ರಷ್ಟು ಹೆಚ್ಚಳ ಕಂಡಿದೆ. 2019ರ ನವೆಂಬರ್‌ನಲ್ಲಿ ಒಟ್ಟು 2.53 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿತ್ತು. ಈ ಬಾರಿ ಒಟ್ಟು 2.85 ಲಕ್ಷ ವಾಹನಗಳ ಮಾರಾಟ ನಡೆದಿದೆ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಒಕ್ಕೂಟ (ಸಿಯಾಮ್) ಹೇಳಿದೆ.

ದ್ವಿಚಕ್ರ ವಾಹನಗಳ ಮಾರಾಟದ ಪ್ರಮಾಣದಲ್ಲಿ ನವೆಂಬರ್ ತಿಂಗಳಲ್ಲಿ ಶೇಕಡ 13.43ರಷ್ಟು ಹೆಚ್ಚಳ ಆಗಿದೆ. ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇಕಡ 57.64ರಷ್ಟು ಇಳಿಕೆ ಕಂಡುಬಂದಿದೆ.

‘ನವೆಂಬರ್ ತಿಂಗಳಲ್ಲಿ ಸಗಟು ಮಾರಾಟದಲ್ಲಿ ಹೆಚ್ಚಳ ಆಗಿದೆ. ಇದಕ್ಕೆ ಮುಖ್ಯ ಕಾರಣ ಹಬ್ಬಗಳು’ ಎಂದು ಸಿಯಾಮ್ ಮಹಾನಿರ್ದೇಶಕ ರಾಜೇಶ್ ಮೆನನ್ ಹೇಳಿದ್ದಾರೆ. ‘ಹಬ್ಬಗಳು ಮಾರುಕಟ್ಟೆಯಲ್ಲಿ ಕೆಲವು ವರ್ಗಗಳ ವಾಹನಗಳ ಮಾರಾಟದ ವಿಚಾರದಲ್ಲಿ ಉತ್ಸಾಹ ಮೂಡಿಸಿದವು. ಆದರೆ, ಮುಂದಿನ ದಿನಗಳಲ್ಲಿ ಇಡೀ ಅರ್ಥ ವ್ಯವಸ್ಥೆಯ ಸ್ಥಿತಿ ಹೇಗಿರುತ್ತದೆ ಎಂಬುದು ಉದ್ಯಮ ಬೆಳವಣಿಗೆಯನ್ನು ನಿರ್ಧರಿಸುತ್ತದೆ’ ಎಂದು ಮೆನನ್ ಹೇಳಿದ್ದಾರೆ.

ನವೆಂಬರ್ ತಿಂಗಳಲ್ಲಿ ತಯಾರಾಗಿರುವ ಪ್ರಯಾಣಿಕ ವಾಹನಗಳ ಒಟ್ಟು ಸಂಖ್ಯೆಯು 23.19 ಲಕ್ಷ. ಕಳೆದ ವರ್ಷದ ಇದೇ ತಿಂಗಳಿನಲ್ಲಿ 22.58 ಲಕ್ಷ ಪ್ರಯಾಣಿಕ ವಾಹನಗಳನ್ನು ತಯಾರಿಸಲಾಗಿತ್ತು. ವಾಹನಗಳ ತಯಾರಿಕೆ ವಿಚಾರದಲ್ಲಿ ಒಟ್ಟು ಶೇಕಡ 2.73ರಷ್ಟು ಹೆಚ್ಚಳ ಆಗಿದೆ ಎಂದು ಸಿಯಾಮ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.