ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಉಕ್ಕು ತಯಾರಕರಿಗೆ ನೀಡಿರುವ ಬೆಂಬಲ ಹಿಂಪಡೆಯಲು ಫಿಮಿ ಮನವಿ

Last Updated 3 ಜನವರಿ 2021, 14:00 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ಉಕ್ಕು ತಯಾರಕರಿಗೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆಯುವಂತೆ ಭಾರತೀಯ ಖನಿಜ ಉದ್ಯಮಗಳ ಒಕ್ಕೂಟವು (ಫಿಮಿ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

‘ಕೇಂದ್ರ ಸರ್ಕಾರದ ರಕ್ಷಣೆ ಮತ್ತು ಉತ್ತೇಜನ ಸಿಗುತ್ತಿದ್ದರೂ ದೇಶಿ ಕಂಪನಿಗಳುಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರದ ಮಟ್ಟಕ್ಕೆ ಸರಿಸಮನಾಗಿ ದೇಶಿ ಮಾರುಕಟ್ಟೆಯಲ್ಲಿ ಉಕ್ಕು ದರ ನಿಗದಿಪಡಿಸುತ್ತಿವೆ. ಈ ಮೂಲಕ ಪರಿಸ್ಥಿತಿಯ ದುರುಪಯೋಗ ಪಡೆದುಕೊಳ್ಳುತ್ತಿವೆ’ ಎಂದು ‘ಫಿಮಿ’ಯ ಪ್ರಧಾನ ಕಾರ್ಯದರ್ಶಿ ಆರ್‌.ಕೆ. ಶರ್ಮಾ ಅವರುಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರಿಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.

ಉಕ್ಕು ಆಮದು ಮೇಲೆ ವಿಧಿಸಿರುವ ಶೇಕಡ 15ರಷ್ಟು ಸುಂಕವನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಅಗ್ಗದ ಸರಕುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಸುರಿಯುವುದನ್ನು ತಡೆಯುವ ಉದ್ದೇಶದ ತೆರಿಗೆ ಸೇರಿದಂತೆ ದೇಶಿ ಉಕ್ಕು ಉದ್ಯಮಕ್ಕೆ ನೀಡುತ್ತಿರುವ ಹಲವು ರೀತಿಯ ಬೆಂಬಲಗಳನ್ನು ಕೈಬಿಡುವಂತೆ ಮನವಿ ಮಾಡಲಾಗಿದೆ.

ಕೋವಿಡ್‌–19 ಪಿಡುಗು ಆರಂಭವಾದಾಗಿನಿಂದ ನಿರಂತರವಾಗಿ ಉಕ್ಕಿನ ಬೆಲೆ ಹೆಚ್ಚಿಸಲಾಗುತ್ತಿದೆ. ಕಳೆದ ಎರಡು ತಿಂಗಳಿನಲ್ಲಿ ಆರು ಬಾರಿ ದರ ಏರಿಕೆ ಮಾಡಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಉಕ್ಕು ತಯಾರಕರು ಆರು ತಿಂಗಳಿನಲ್ಲಿ ಉಕ್ಕು ದರವನ್ನು ಶೇಕಡ 55ರಷ್ಟು ಹೆಚ್ಚಿಸುವ ಮೂಲಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗದಂತೆ ಮಾಡಿದ್ದಾರೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಕಳೆದ ತಿಂಗಳು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT