ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ ಅಂತ್ಯಕ್ಕೆ 16ನೇ ಹಣಕಾಸು ಆಯೋಗ ರಚನೆ: ಟಿ.ವಿ. ಸೋಮನಾಥನ್‌

Published 20 ಆಗಸ್ಟ್ 2023, 13:34 IST
Last Updated 20 ಆಗಸ್ಟ್ 2023, 13:34 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು 16ನೇ ಹಣಕಾಸು ಆಯೋಗವನ್ನು ನವೆಂಬರ್ ಅಂತ್ಯದ ವೇಳೆಗೆ ರಚನೆ ಮಾಡುವ ನಿರೀಕ್ಷೆ ಇದೆ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್‌ ಹೇಳಿದ್ದಾರೆ.

2026ರ ಏಪ್ರಿಲ್‌ 1ರಿಂದ ಐದು ಹಣಕಾಸು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆ ವರಮಾನವನ್ನು ರಾಜ್ಯಗಳಿಗೆ ಎಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು ಎನ್ನುವುದನ್ನೂ ಒಳಗೊಂಡು ಹಲವು ವಿಷಯಗಳಲ್ಲಿ ಶಿಫಾರಸು ನೀಡಲಿದೆ.

15ನೇ ಹಣಕಾಸು ಆಯೋಗವು 2021–22ರಿಂದ 2025–26ರವರೆಗಿನ ಐದು ಹಣಕಾಸು ವರ್ಷಗಳಿಗೆ ಸಂಬಂಧಿಸಿದ ವರದಿಯನ್ನು 2020ರ ನವೆಂಬರ್‌ 9ರಂದು ಸಲ್ಲಿಸಿದೆ.

2021–22ರಿಂದ 2025–26ರವರೆಗೆ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆ ವರಮಾನದಲ್ಲಿ ರಾಜ್ಯಗಳಿಗೆ ಶೇಕಡ 42ರಷ್ಟು ಪಾಲು ನೀಡುವಂತೆ ಎನ್‌.ಕೆ. ಸಿಂಗ್‌ ನೇತೃತ್ವದ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದೆ. 14ನೇ ಆಯೋಗವು ಮಾಡಿದ್ದ ಶಿಫಾರಸಿನಲ್ಲಿಯೂ, ಇದೇ ಪ್ರಮಾಣದಲ್ಲಿ ಹಂಚಿಕೆ ಆಗಬೇಕು ಎಂದು ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT