ನವದೆಹಲಿ: ದೇಶದ ಪ್ರಮುಖ ಎಫ್ಎಂಸಿಜಿ ಕಂಪನಿ ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ನ (ಎಚ್ಯುಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ ಪ್ರಿಯಾ ನಾಯರ್ ನೇಮಕವಾಗಿದ್ದಾರೆ.

ಆಗಸ್ಟ್ 1ರಿಂದ ನೇಮಕವು ಜಾರಿಗೆ ಬರಲಿದ್ದು, ಅಧಿಕಾರಾವಧಿ ಐದು ವರ್ಷವಾಗಿದೆ. ಈ ಹುದ್ದೆಗೆ ನೇಮಕವಾದ ಮೊದಲ ಮಹಿಳೆ ಇವರಾಗಿದ್ದಾರೆ.

ರೋಹಿತ್ ಜಾವಾ ಅವರು ಜುಲೈ 31ರಂದು ಆ ಹುದ್ದೆಯನ್ನು ತೆರವುಗೊಳಿಸಲಿದ್ದಾರೆ. ಇವರ ಸ್ಥಾನಕ್ಕೆ ನಾಯರ್ ನೇಮಕಗೊಂಡಿದ್ದಾರೆ. 1995ರಲ್ಲಿ ಎಚ್ಯುಎಲ್ಗೆ ಸೇರಿದ ನಾಯರ್ ಕಂಪನಿಯ, ಮಾರುಕಟ್ಟೆ ವಿಭಾಗದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಕಂಪನಿ ಗುರುವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.