ಸೋಮವಾರ, ಆಗಸ್ಟ್ 10, 2020
23 °C

ಜೂನ್‌ನಲ್ಲಿ ಹಿಗ್ಗಿದ ವಿತ್ತೀಯ ಕೊರತೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹಾಲಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ವಿತ್ತೀಯ ಕೊರತೆಯು ₹ 6.62 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಬಜೆಟ್‌ ಅಂದಾಜಿನ ಶೇಕಡ 83.2ರಷ್ಟು. ಲಾಕ್‌ಡೌನ್‌ ಕಾರಣದಿಂದಾಗಿ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿದ್ದು ಇದಕ್ಕೆ ಮುಖ್ಯ ಕಾರಣ.

ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇಕಡ 61.4ರಷ್ಟು ಆಗಿತ್ತು. 2020–21ರ ಸಾಲಿನಲ್ಲಿ ವಿತ್ತೀಯ ಕೊರತೆಯು ಒಟ್ಟು ₹ 7.96 ಲಕ್ಷ ಕೋಟಿ ಆಗಿರಲಿದೆ (ಅಂದರೆ ಒಟ್ಟು ಜಿಡಿಪಿಯ ಶೇಕಡ 3.5ರಷ್ಟು) ಎಂದು ಕೇಂದ್ರ ಸರ್ಕಾರ ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಅಂದಾಜಿಸಿತ್ತು.

ಆದರೆ, ಕೋವಿಡ್‌–19 ಬಿಕ್ಕಟ್ಟು ಅರ್ಥವ್ಯವಸ್ಥೆಯಲ್ಲಿ ಸೃಷ್ಟಿಸಿದ ತೊಂದರೆಗಳ ಕಾರಣ ಈಗ ಈ ಅಂದಾಜನ್ನು ಪರಿಷ್ಕರಿಸಬೇಕಾಗಬಹುದು. 2019–20ರಲ್ಲಿ ವಿತ್ತೀಯ ಕೊರತೆಯು ಏಳು ವರ್ಷಗಳ ಅತ್ಯಧಿಕ ಪ್ರಮಾಣವಾದ ಶೇಕಡ 4.6ರಷ್ಟಕ್ಕೆ ತಲುಪಿತ್ತು.

ಜೂನ್‌ ಅಂತ್ಯದವರೆಗೆ ಕೇಂದ್ರ ಸರ್ಕಾರವು ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಪಾಲು ಎಂದು ಒಟ್ಟು ₹ 1.34 ಲಕ್ಷ ಕೋಟಿಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಈ ಮೊತ್ತವು ಕಳೆದ ವರ್ಷಕ್ಕೆ ಹೋಲಿಸಿದರೆ ₹ 14,588 ಕೋಟಿ ಕಡಿಮೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು