ಸೋಮವಾರ, ಸೆಪ್ಟೆಂಬರ್ 23, 2019
28 °C

ಬದಲಾಗದ ಕನಿಷ್ಠ ಹೂಡಿಕೆ ಮಾನದಂಡ

Published:
Updated:

ನವದೆಹಲಿ: ವಿತ್ತೀಯ ಹೊಣೆಗಾರಿಕೆ ನಿಭಾಯಿಸುವ ಕುರಿತು ಭಾರತಕ್ಕೆ ನೀಡಿರುವ ಸ್ಥಾನಮಾನವನ್ನು ಮೇಲ್ದರ್ಜೆಗೇರಿಸಲು ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ‘ಫಿಚ್‌’ ನಿರಾಕರಿಸಿದೆ.

ಸಾಲದ ಪ್ರಮಾಣ ಗರಿಷ್ಠ ಮಟ್ಟದಲ್ಲಿದೆ. ಹೀಗಾಗಿ ವಿತ್ತೀಯ ಕೊರತೆ ನಿಯಂತ್ರಿಸಲು ಹೆಚ್ಚಿನ ಅವಕಾಶ ಸಿಗುವುದಿಲ್ಲ ಎನ್ನುವ ಕಾರಣ ನೀಡಿ, ಕನಿಷ್ಠ ಹೂಡಿಕೆ ಮಾನದಂಡವನ್ನೇ (ಬಿಬಿಬಿ ಮೈನಸ್‌) ಮುಂದುವರಿಸಿದೆ. ಆದರೆ, ಈ ಸ್ಥಾನ ಮಾನದ ಮುನ್ನೋಟ ಸ್ಥಿರವಾಗಿರಲಿದೆ ಎಂದು ಹೇಳಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಡಿಪಿ ದರ ಶೇ 6.6 ರಷ್ಟಾಗಲಿದೆ. ಇದು ಕಳೆದ ವರ್ಷ ಇದ್ದ ಶೇ 6.8ಕ್ಕಿಂತಲೂ ಕಡಿಮೆ ಇರಲಿದೆ ಎಂದಿದೆ.

Post Comments (+)