ಶನಿವಾರ, ಡಿಸೆಂಬರ್ 5, 2020
25 °C

ಅರವಿಂದ್ ಫ್ಯಾಷನ್ಸ್ ಲಿಮಿಟೆಡ್‌ನಲ್ಲಿ ಫ್ಲಿಪ್‌ಕಾರ್ಟ್‌ ಗ್ರೂಪ್ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫ್ಲಿಪ್‌ಕಾರ್ಟ್ ಸಮೂಹವು ಅರವಿಂದ್ ಫ್ಯಾಷನ್ಸ್ ಲಿಮಿಟೆಡ್‌ನಲ್ಲಿ (ಎಎಫ್ಎಲ್) ₹ 260 ಕೋಟಿ ಹೂಡಿಕೆ ಮಾಡಿದೆ.

ಈ ಹೂಡಿಕೆಯು ಫ್ಲಿಪ್‌ಕಾರ್ಟ್‌ ಗ್ರೂಪ್‌ ಮತ್ತು ಎಎಫ್ಎಲ್ ನಡುವಣ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಫ್ಲೈಯಿಂಗ್ ಮಷಿನ್ ಬ್ರ್ಯಾಂಡ್‌ನ ಮಾಲೀಕತ್ವ ಹೊಂದಿರುವ ಅರವಿಂದ್ ಯೂತ್ ಬ್ರ್ಯಾಂಡ್‌ನ ಅಂಗಸಂಸ್ಥೆ ಈ ಎಎಫ್ಎಲ್. ಭಾರತದಲ್ಲಿನ ಯುವಪೀಳಿಗೆಯ ಫ್ಯಾಷನ್ ಅಗತ್ಯಗಳು ಮತ್ತು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್ ಗ್ರೂಪ್ ಮತ್ತು ಎಎಫ್ಎಲ್ ಸಂಸ್ಥೆಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ.

ಡೆನಿಮ್‌ನ ಮೊದಲ ಬ್ರ್ಯಾಂಡ್ ಆಗಿರುವ ಫ್ಲೈಯಿಂಗ್ ಮಷಿನ್, ಭಾರತದಲ್ಲಿ ಡೆನಿಮ್ ಬ್ರ್ಯಾಂಡ್‌ಗಳಲ್ಲಿ ಮುಂಚೂಣಿಯಲ್ಲಿದೆ. ತನ್ನ ಬ್ರ್ಯಾಂಡ್ ಪರಂಪರೆ, ವಿನ್ಯಾಸದ ಸೂಕ್ಷ್ಮತೆಗಳು ಮತ್ತು ಯುವ ಪೀಳಿಗೆಯ ಆಕರ್ಷಣೆಯ ಮೂಲಕ ನಗರ ಮತ್ತು ಸಣ್ಣ ನಗರಗಳಲ್ಲಿ ಜನಪ್ರಿಯಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು