ನವದೆಹಲಿ: ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು 2020–21ನೇ ಬೆಳೆ ವರ್ಷದಲ್ಲಿ ಶೇ 3.74ರಷ್ಟು ಹೆಚ್ಚಾಗುವ ಅಂದಾಜು ಮಾಡಲಾಗಿದ್ದು, ದಾಖಲೆಯ 30.86 ಕೋಟಿ ಟನ್‌ಗಳಿಗೆ ತಲುಪಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಬುಧವಾರ ಹೇಳಿದೆ.

ಆಹಾರ ಧಾನ್ಯಗಳ ಉತ್ಪಾದನೆಯ ಕುರಿತಂತೆ ಸಚಿವಾಲಯವು ಬುಧವಾರ ನಾಲ್ಕನೆಯ ಮುಂಗಡ ಅಂದಾಜನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಮೂರನೇ ಅಂದಾಜಿಗೆ ಹೋಲಿಸಿದರೆ ನಾಲ್ಕನೇ ಅಂದಾಜಿನಲ್ಲಿ 32.2 ಲಕ್ಷ ಟನ್‌ಗಳಷ್ಟು ಹೆಚ್ಚು ಉತ್ಪಾದನೆ ಆಗಲಿದೆ ಎಂದು ಹೇಳಿದೆ.

2019–20ನೇ ಬೆಳೆ ವರ್ಷದಲ್ಲಿ 29.75 ಕೋಟಿ ಟನ್‌ಗಳಷ್ಟು ಗರಿಷ್ಠ ಪ್ರಮಾಣದ ಆಹಾರ ಧಾನ್ಯಗಳ ಉತ್ಪಾದನೆ ಆಗಿತ್ತು.

ರೈತರ ಅವಿರತ ಪರಿಶ್ರಮ, ವಿಜ್ಞಾನಿಗಳ ಕೌಶಲ ಹಾಗೂ ಸರ್ಕಾರದ ಕೃಷಿ ಮತ್ತು ರೈತ ಸ್ನೇಹಿ ನೀತಿಗಳಿಂದಾಗಿ ದೇಶದಲ್ಲಿ ದಾಖಲೆಯ ಪ್ರಮಾಣದ ಉತ್ಪಾದನೆ ಆಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.