ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ಸಂಗ್ರಹ: ₹ 84,892 ಕೋಟಿಗಳಷ್ಟು ಭಾರಿ ಇಳಿಕೆ

Last Updated 9 ಏಪ್ರಿಲ್ 2022, 10:56 IST
ಅಕ್ಷರ ಗಾತ್ರ

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ವಾರಾಂತ್ಯದಲ್ಲಿ ₹ 84,892 ಕೋಟಿಗಳಷ್ಟು ಕಡಿಮೆ ಆಗಿದೆ. ಈವರೆಗೆ ವಾರವೊಂದರಲ್ಲೇ ಆಗಿರುವ ಅತ್ಯಂತ ಹೆಚ್ಚಿನ ಇಳಿಕೆ ಇದಾಗಿದೆ. ಹೀಗಾಗಿ ಒಟ್ಟಾರೆ ಮೀಸಲು ಸಂಗ್ರಹವು ₹ 46.09 ಲಕ್ಷ ಕೋಟಿಗಳಿಗೆ ತಲುಪಿದೆ.

ಮಾರ್ಚ್‌ 25ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹ 46.94 ಲಕ್ಷ ಕೋಟಿಗಳಷ್ಟು ಇತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ಮೀಸಲು ಸಂಗ್ರಹದಲ್ಲಿ ಅತಿ ಹೆಚ್ಚಿನ ಪಾಲು ಹೊಂದಿರುವ ವಿದೇಶಿ ಕರೆನ್ಸಿಗಳ ಸಂಗ್ರಹದಲ್ಲಿ ₹ 81,472 ಕೋಟಿಗಳಷ್ಟು ಭಾರಿ ಇಳಿಕೆ ಆಗಿರುವುದೇ ಒಟ್ಟಾರೆ ಮೀಸಲು ಸಂಗ್ರದಲ್ಲಿನ ಕುಸಿತಕ್ಕೆ ಕಾರಣ.

ಚಿನ್ನದ ಮೀಸಲು ಸಂಗ್ರಹವು ₹ 3,853 ಕೋಟಿಗಳಷ್ಟು ಕಡಿಮೆ ಆಗಿ ₹ 3.24 ಲಕ್ಷ ಕೋಟಿಗಳಿಗೆ ಇಳಿಕೆ ಕಂಡಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಮೀಸಲು ಸಂಗ್ರಹವು ₹ 30 ಕೋಟಿ ಹೆಚ್ಚಾಗಿ ₹ 38,988 ಕೋಟಿಗಳಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT