ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ಸಂಗ್ರಹ: ಸಾರ್ವಕಾಲಿಕ ದಾಖಲೆ

Last Updated 26 ಡಿಸೆಂಬರ್ 2020, 10:36 IST
ಅಕ್ಷರ ಗಾತ್ರ

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಡಿಸೆಂಬರ್‌ 18ಕ್ಕೆ ಕೊನೆಗೊಂಡ ವಾರದಲ್ಲಿ ₹ 18,994 ಕೋಟಿಗಳಷ್ಟು ಹೆಚ್ಚಾಗಿ, ದಾಖಲೆಯ ₹ 42.99 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಅದಕ್ಕೂ ಹಿಂದಿನ ವಾರ ₹ 5,757 ಕೋಟಿಗಳಷ್ಟು ಕಡಿಮೆಯಾಗಿ ₹ 42.77 ಲಕ್ಷ ಕೋಟಿಗಳಿಗೆ ತಲುಪಿತ್ತು. ವಿದೇಶಿ ವಿನಿಮಯ ಮೀಸಲು ಸಂಗ್ರಹದಲ್ಲಿ ವಿದೇಶಿ ಕರೆನ್ಸಿಗಳ ಪಾಲು ಗರಿಷ್ಠ ಮಟ್ಟದಲ್ಲಿದೆ. ವಿದೇಶಿ ಕರೆನ್ಸಿಗಳ ಸಂಗ್ರಹ ₹ 10,212 ಕೋಟಿ ಹೆಚ್ಚಾಗಿದ್ದು, ₹ 39.78 ಲಕ್ಷ ಕೋಟಿಗಳಷ್ಟಾಗಿದೆ.

ಚಿನ್ನದ ಮೀಸಲು ಸಂಗ್ರಹ ₹ 2.73 ಲಕ್ಷ ಕೋಟಿಗಳಷ್ಟಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್‌) ಭಾರತದ ಮೀಸಲು ಸಂಗ್ರಹವು ₹ 1,184 ಕೋಟಿ ಹೆಚ್ಚಾಗಿ ₹ 36,038 ಕೋಟಿಗಳಿಗೆ ತಲುಪಿದೆ ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT