ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಜುಸ್‌ ಲೆಕ್ಕ ಪರಿಶೋಧಕರ ನಿರ್ಲಕ್ಷ್ಯ ಬಹಿರಂಗ: ಐಸಿಎಐ

Published 13 ಮಾರ್ಚ್ 2024, 14:04 IST
Last Updated 13 ಮಾರ್ಚ್ 2024, 14:04 IST
ಅಕ್ಷರ ಗಾತ್ರ

ಮುಂಬೈ: ಬೈಜುಸ್‌ ಬಹಿರಂಗಪಡಿಸಿರುವ ಹಣಕಾಸಿನ ಮಾಹಿತಿಗಳಲ್ಲಿ ಕಂಪನಿಯ ಲೆಕ್ಕ ಪರಿಶೋಧಕರು ತೀವ್ರ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ತಿಳಿಸಿದೆ. ‌

ಕೆಲವು ನಿರ್ದಿಷ್ಟ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ ಬೈಜುಸ್‌ ನೀಡಿರುವ ಮಾಹಿತಿ ಬಗ್ಗೆ ಐಸಿಎಐ ಪರಿಶೀಲನೆ ನಡೆಸಿದ್ದು, ಲೆಕ್ಕ ಪರಿಶೋಧಕರ ನಿರ್ಲಕ್ಷ್ಯವು ಬೆಳಕಿಗೆ ಬಂದಿದೆ ಎಂದು ಐಸಿಎಐ ಅಧ್ಯಕ್ಷ ರಂಜೀತ್ ಕುಮಾರ್ ಅಗರ್ವಾಲ್ ಅವರು, ಬುಧವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಹಣಕಾಸು ವರದಿ ಪರಿಶೀಲನಾ ಮಂಡಳಿ (ಎಫ್‌ಆರ್‌ಆರ್‌ಬಿ) ಕೂಡ ಪರಿಶೀಲನೆ ನಡೆಸುತ್ತಿದೆ. ಬೈಜುಸ್‌ ಲೆಕ್ಕ ಪರಿಶೋಧಕರ ವಿರುದ್ಧ ದಂಡಾರ್ಹ ಕ್ರಮಕೈಗೊಳ್ಳುವಂತೆ ಮಂಡಳಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದ್ದಾರೆ.

‘ಅಲ್ಲದೆ, ಲೆಕ್ಕ ಪರಿಶೋಧಕರು ಪೇಟಿಎಂಗೆ ಹೆಚ್ಚಿನ ಪಾವತಿ ಮಾಡಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲು ಸ್ವಯಂಪ್ರೇರಿತವಾಗಿ ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.

‘ನಾವು ಸಲ್ಲಿಸುವ ವರದಿ ಬಗ್ಗೆ ಎಫ್‌ಆರ್‌ಆರ್‌ಬಿಯಿಂದ ವೈಯಕ್ತಿಕ ಹಾಗೂ ಗುಂಪು ಹಂತದಲ್ಲಿ ಮೂರು ಹಂತಗಳಲ್ಲಿ ಪರಾಮರ್ಶೆ ನಡೆಯಲಿದೆ. ಆ ನಂತರ ಲೆಕ್ಕ ಪರಿಶೋಧಕರ ಪಾತ್ರದ ಬಗ್ಗೆ ನಿರ್ದಿಷ್ಟ ಕ್ರಮಕೈಗೊಳ್ಳಲಿದೆ. ಬಳಿಕ ನಾವು ನೀಡಿರುವ ವರದಿಯು ಸಾರ್ವಜನಿಕರಿಗೆ ಲಭ್ಯವಾಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT