ನವದೆಹಲಿ: ಈ ವಾರ ನಾಲ್ಕು ಕಂಪನಿಗಳು ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ (ಐಪಿಒ) ಮುಕ್ತವಾಗಿಸಲಿದ್ದು, ಒಟ್ಟಾರೆ ₹ 9,123 ಕೋಟಿ ಬಂಡವಾಳ ಸಂಗ್ರಹವಾಗುವ ನಿರೀಕ್ಷೆಇದೆ.

ಷೇರುಪೇಟೆಗಳಲ್ಲಿ ಇರುವ ಮಾಹಿತಿಯ ಪ್ರಕಾರ, ಶ್ಯಾಮ್ ಮೆಟಾಲಿಕ್ಸ್ ಆ್ಯಂಡ್ ಎನರ್ಜಿ ಲಿಮಿಟೆಡ್ ಮತ್ತು ಸೋನಾ ಬಿಎಲ್ಡಬ್ಲ್ಯು ಪ್ರಿಸಿಷನ್ ಪೋರ್ಜಿಂಗ್ಸ್ (ಸೋನಾ ಕಾಮ್ಸ್ಟಾರ್ಸ್) ಕಂಪನಿಗಳ ಐಪಿಒ ಸೋಮವಾರದಿಂದ ಆರಂಭವಾಗಲಿದೆ. ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ದೊಡ್ಲಾ ಡೇರಿ ಕಂಪನಿಗಳ ಐಪಿಒ ಬುಧವಾರದಿಂದ ಆರಂಭವಾಗಲಿದೆ.

ಕ್ಲೀನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಜುಲೈ ತಿಂಗಳ ಮೊದಲ ವಾರದಲ್ಲಿ ಷೇರುಪೇಟೆ ಪ್ರವೇಶಿಸುವ ನಿರೀಕ್ಷೆ ಇದೆ. ಇಂಡಿಯಾ ಪೆಸ್ಟಿಸೈಡ್ಸ್ ಕಂಪನಿಯು ಇದೇ ತಿಂಗಳು ಅಥವಾ ಜುಲೈನಲ್ಲಿ ಐಪಿಒ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಏಂಜಲ್ ಬ್ರೋಕಿಂಗ್ನ ಷೇರು ಸಂಶೋಧನಾ ಸಹಾಯಕ ಯಶ್ ಗುಪ್ತಾ ತಿಳಿಸಿದ್ದಾರೆ.

ಶ್ಯಾಮ್ ಮೆಟಾಲಿಕ್ಸ್ ಆ್ಯಂಡ್ ಎನರ್ಜಿ ಕಂಪನಿಯು ಐಪಿಒ ಮೂಲಕ ₹ 909 ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಪ್ರತಿ ಷೇರಿನ ಬೆಲೆ ₹ 303–306ರಂತೆ ನಿಗದಿಪಡಿಸಲಾಗಿದೆ. ಸೋಮವಾರದಿಂದ ಬುಧವಾರದವರೆಗೆ ಷೇರು ಖರೀದಿಗೆ ಅವಕಾಶ ಇರಲಿದೆ.

ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಕಂಪನಿಯು ಐಪಿಒದಿಂದ ₹ 2,144 ಕೋಟಿ ಸಂಗ್ರಹಿಸುವ ನಿರೀಕ್ಷೆ ಹೊಂದಿದೆ. ಬುಧವಾರದಿಂದ ಶುಕ್ರವಾರದವರೆಗೆ ಖರೀದಿಗೆ ಅವಕಾಶ ಇರಲಿದೆ. ಸೋನಾ ಕಾಮ್ಸ್ಟಾರ್ಸ್ ಕಂಪನಿಯು ₹ 5,550 ಕೋಟಿ ಮೊತ್ತದ ಹಾಗೂ ದೊಡ್ಲಾ ಡೇರಿ ₹ 520 ಕೋಟಿ ಮೊತ್ತದ ಐಪಿಒ ಬಿಡುಗಡೆ ಮಾಡಲಿವೆ.

ಷೇರುಪೇಟೆಗೆ ನಗದು ಹರಿವು ಉತ್ತಮವಾಗಿದೆ. ರಿಟೇಲ್ ಹೂಡಿಕೆದಾರರ ಭಾಗವಹಿಸುವಿಕೆಯು ಹೆಚ್ಚಿನ ಮಟ್ಟದಲ್ಲಿದೆ ಎಂದು ಆ್ಯಕ್ಸಿಸ್ ಸೆಕ್ಯುರಿಟೀಸ್ನ ಮುಖ್ಯ ಹೂಡಿಕೆ ಅಧಿಕಾರಿ ನವೀನ್ ಕುಲಕರ್ಣಿ ಹೇಳಿದ್ದಾರೆ.

ಸಾಲ ತೀರಿಸಲು, ಬಂಡವಾಳ ವೆಚ್ಚದ ಅಗತ್ಯ ಈಡೇರಿಸಿಕೊಳ್ಳಲು ಮತ್ತು ಇನ್ನಿತರ ಕಾರ್ಪೊರೇಟ್ ಉದ್ದೇಶಗಳಿಗಾಗಿ ಕಂಪನಿಗಳು ಬಂಡವಾಳ ಸಂಗ್ರಹಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.