ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

4 ಬ್ಯಾಂಕ್‌ನಿಂದ ಕೇಂದ್ರ ಸರ್ಕಾರಕ್ಕೆ ₹6,481 ಕೋಟಿ ಡಿವಿಡೆಂಡ್‌ ಪಾವತಿ

Published 10 ಜುಲೈ 2024, 15:30 IST
Last Updated 10 ಜುಲೈ 2024, 15:30 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಸೇರಿ ನಾಲ್ಕು ಬ್ಯಾಂಕ್‌ಗಳಿಂದ ಕೇಂದ್ರ ಸರ್ಕಾರಕ್ಕೆ ₹6,481 ಕೋಟಿ ಡಿವಿಡೆಂಡ್‌ ಸಲ್ಲಿಕೆಯಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಬ್ಯಾಂಕ್‌ಗಳ ಮುಖ್ಯಸ್ಥರು ಚೆಕ್ ಸಲ್ಲಿಸಿದ್ದಾರೆ.

ಬ್ಯಾಂಕ್‌ ಆಫ್‌ ಬರೋಡಾ ₹2,514 ಕೋಟಿ, ಕೆನರಾ ಬ್ಯಾಂಕ್‌ ₹1,838 ಕೋಟಿ, ಇಂಡಿಯನ್‌ ಬ್ಯಾಂಕ್‌ ₹1,193 ಕೋಟಿ, ಬ್ಯಾಂಕ್‌ ಆಫ್‌ ಇಂಡಿಯಾ ₹935 ಕೋಟಿ ಡಿವಿಡೆಂಡ್‌ ಪಾವತಿಸಿದೆ. ಎಕ್ಸಿಮ್‌ ಬ್ಯಾಂಕ್‌ ₹252 ಕೋಟಿ ಡಿವಿಡೆಂಡ್‌ ಪಾವತಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT