ಬುಧವಾರ, ನವೆಂಬರ್ 13, 2019
22 °C

ಎಫ್‌ಪಿಐ ಹೂಡಿಕೆ ₹ 12 ಸಾವಿರ ಕೋಟಿ

Published:
Updated:

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಬಂಡವಾಳ ಮಾರುಕಟ್ಟೆಯಲ್ಲಿ ನವೆಂಬರ್‌ 1 ರಿಂದ 9ರವರೆಗೆ ₹ 12,108 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ.

ಹೂಡಿಕೆದಾರರು, ₹ 6,434 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ  ₹ 5,674 ಕೋಟಿ ಮೌಲ್ಯದ ಸಾಲಪತ್ರ
ಗಳನ್ನು ಖರೀದಿಸಿದ್ದಾರೆ. ಇದರಿಂದ ಒಟ್ಟಾರೆ ಒಳಹರಿವು ₹ 12,108 ಕೋಟಿಗಳಷ್ಟಾಗಿದೆ.

ಆರ್ಥಿಕ ಸುಧಾರಣಾ ಕ್ರಮಗಳ ಘೋಷಣೆಯಿಂದಾಗಿ ಷೇರುಪೇಟೆ ವಹಿವಾಟು ಸಕಾರಾತ್ಮಕ ಮಟ್ಟದಲ್ಲಿ ನಡೆಯುತ್ತಿದೆ. ಹೀಗಾಗಿ ಬಂಡವಾಳ ಒಳಹರಿವು ಹೆಚ್ಚಾಗುತ್ತಿದೆ.

ಸೆಪ್ಟೆಂಬರ್‌ನಲ್ಲಿ ₹ 6,558 ಕೋಟಿ ಮತ್ತು ಅಕ್ಟೋಬರ್‌ನಲ್ಲಿ ₹ 16,465 ಕೋಟಿ ಹೂಡಿಕೆಯಾಗಿತ್ತು.

‘ಹೂಡಿಕೆದಾರರು ಪೂರ್ಣ ಮನಸ್ಸಿನಿಂದ ವಹಿವಾಟು ನಡೆಸುತ್ತಿಲ್ಲ. ಈ ವಾರದಲ್ಲಿ ಪ್ರತಿ ದಿನಕ್ಕೆ ಸರಾಸರಿ ₹ 550 ಕೋಟಿ ಹೂಡಿಕೆ ಮಾಡಿದ್ದಾರೆ. ಆದರೆ, ಈ ಹಿಂದೆ ಪ್ರತಿ ದಿನದ ಹೂಡಿಕೆಯು ₹ 1,500 ಕೋಟಿಗಳಿಂದ ₹ 2 ಸಾವಿರ ಕೋಟಿಗಳಷ್ಟಿತ್ತು’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ  ಉಮೇಶ್‌ ಮೆಹ್ತಾ ಹೇಳಿದ್ದಾರೆ.

‘ವಿತ್ತೀಯ ಹೊಣೆಗಾರಿಕೆ ನಿಭಾಯಿಸುವ ಭಾರತದ ಸ್ಥಾನಮಾನವು ನಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದು ಜಾಗತಿಕ ರೇಟಿಂಗ್ಸ್‌ ಸಂಸ್ಥೆ ಮೂಡೀಸ್‌ ಹೇಳಿದೆ. ಹೀಗಾಗಿ ಅಲ್ಪಾವಧಿಯಲ್ಲಿ ಎಫ್‌ಪಿಐ ಒಳಹರಿವು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಗ್ರೋವ್‌ ಸಂಸ್ಥೆಯು ಸಹ ಸ್ಥಾಪಕ ಹರ್ಷ್‌ ಜೈನ್‌ ಅಭಿಪ್ರಾಯಪಟ್ಟಿದ್ದಾರೆ.

 

ಪ್ರತಿಕ್ರಿಯಿಸಿ (+)