ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ: ಹೂಡಿಕೆಗಿಂತ ಹೊರಹರಿವೇ ಹೆಚ್ಚು

ಜಾಗತಿಕ ಆರ್ಥಿಕತೆಯು ಮಂದಗತಿಯ ಬೆಳವಣಿಗೆ ಪರಿಣಾಮ
Last Updated 30 ಡಿಸೆಂಬರ್ 2018, 20:08 IST
ಅಕ್ಷರ ಗಾತ್ರ

ನವದೆಹಲಿ:ಈ ವರ್ಷ ವಿದೇಶಿ ಸಾಂಸ್ಥಿಕ ಬಂಡವಾಳ (ಎಫ್‌ಪಿಐ) ಆಕರ್ಷಿಸುವಲ್ಲಿ ಭಾರತದ ಮಾರುಕಟ್ಟೆ ವಿಫಲವಾಗಿದೆ ಎನ್ನುವುದು ಮಾರುಕಟ್ಟೆ ತಜ್ಞರು ವಿಶ್ಲೇಷಣೆಯಾಗಿದೆ.

2018ರಲ್ಲಿ ವಿದೇಶಿ ಬಂಡವಾಳ ಹೂಡಿಕೆಗಿಂತಲೂ ವೇಗವಾಗಿ ಹೊರ ಹೋಗಿದೆ. 2017ರಲ್ಲಿ ಷೇರುಪೇಟೆ ಮತ್ತು ಸಾಲಪತ್ರ ಮಾರುಕಟ್ಟೆಯಲ್ಲಿ ಒಟ್ಟಾರೆ ₹ 2 ಲಕ್ಷ ಕೋಟಿ ಹೂಡಿಕೆಯಾಗಿತ್ತು. 2018ರಲ್ಲಿ ಇದುವರೆಗೆ ₹ 82,500 ಕೋಟಿ ಹೊರ
ಹೋಗಿದ್ದು, ಒಟ್ಟಾರೆ ₹ 1 ಲಕ್ಷ ಕೋಟಿಗೆತಲುಪುವ ಅಂದಾಜು ಮಾಡಲಾಗಿದೆ.

ಭಾರತದ ಕಂಪನಿಗಳಲ್ಲಿ ಇವರು ಹೊಂದಿರುವ ಷೇರುಪಾಲು ಸರಾಸರಿ ಶೇ 25ರಷ್ಟಿದೆ. ಪ್ರವರ್ತಕರ (ಶೇ 60) ನಂತರ ಅತಿ ಹೆಚ್ಚಿನ ಪಾಲು ಹೊಂದಿದ್ದಾರೆ. 2018ರ ಆರಂಭದಲ್ಲಿ ಹೂಡಿಕೆಗೆ ಗಮನ ನೀಡಿದ್ದರು. ಆದರೆ, ಜಾಗತಿಕ ಆರ್ಥಿಕತೆಯ ಮಂದಗತಿಯ ಬೆಳವಣಿಗೆ, ದೀರ್ಘಾವಧಿಯ ಹೂಡಿಕೆಗೆ ಬಂಡವಾಳ ಗಳಿಕೆ ತೆರಿಗೆಯಿಂದ ಹೊರಹರಿವು ಹೆಚ್ಚಾಗುತ್ತಿದೆ.

ರಾಜಕೀಯ ವಿದ್ಯಮಾನಗಳು ಹಾಗೂ ಆರ್‌ಬಿಐ ಗವರ್ನರ್‌ ಹಠಾತ್‌ ರಾಜೀನಾಮೆಯಿಂದ ಹೊರಹರಿವು ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೂಡಿಕೆ: ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಕ್ರಮವಾಗಿ ₹ 12,266 ಕೋಟಿ ಹಾಗೂ ₹ 5,400 ಕೋಟಿ ಹೂಡಿಕೆ ಮಾಡಿದ್ದಾರೆ. ‘ಮೂರು ತಿಂಗಳಿನಲ್ಲಿ ಕಚ್ಚಾ ತೈಲ ದರ ಶೇ 40ರಷ್ಟು ಇಳಿಕೆಯಾಗಿದೆ. ರೂಪಾಯಿ ಮೌಲ್ಯ ಉತ್ತಮ ಚೇತರಿಕೆ ಕಂಡಿದೆ. ಹೀಗಾಗಿ ಹೂಡಿಕೆಯಲ್ಲಿ ಹೆಚ್ಚಾಗಿದೆ’ ಎಂದು ಆನ್‌ಲೈನ್‌ ಮ್ಯೂಚುವಲ್‌ ಫಂಡ್‌ ಹೂಡಿಕೆ ತಾಣ ಗ್ರೋವ್‌ನ ಸಿಒಒ ಹರ್ಶ ಜೈನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT