ನವದೆಹಲಿ: ಪ್ರಸಕ್ತ ತಿಂಗಳ ಮೊದಲ ವಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್ಪಿಐ) ದೇಶದ ಈಕ್ವಿಟಿ ಮಾರುಕಟ್ಟೆಯಿಂದ ₹24,753 ಕೋಟಿ ಮೊತ್ತವನ್ನು ವಾಪಸ್ ಪಡೆದಿದ್ದಾರೆ.

ಜನವರಿಯಲ್ಲಿ ₹78,027 ಕೋಟಿ ಮತ್ತು ಫೆಬ್ರುವರಿಯಲ್ಲಿ ₹34,574 ಕೋಟಿ ಬಂಡವಾಳ ಹಿಂಪಡೆಯಲಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಷೇರುಪೇಟೆಯಿಂದ ಒಟ್ಟು ₹1.37 ಲಕ್ಷ ಕೋಟಿ ಬಂಡವಾಳ ಹಿಂಪಡೆಯಲಾಗಿದೆ. ಕಳೆದ ವರ್ಷದ ಡಿಸೆಂಬರ್ 13ರಿಂದ ಇಲ್ಲಿಯವರೆಗೆ ಒಟ್ಟು ₹1.49 ಲಕ್ಷ ಕೋಟಿ ಬಂಡವಾಳ ಹೊರಹೋಗಿದೆ.

‘ಮೆಕ್ಸಿಕೊ, ಕೆನಡಾ, ಚೀನಾದ ಮೇಲೆ ಅಮೆರಿಕವು ಅತಿಹೆಚ್ಚು ಸುಂಕ ವಿಧಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲೆ ಈ ರಾಷ್ಟ್ರಗಳು ಪ್ರತಿಸುಂಕ ವಿಧಿಸಲು ಮುಂದಾಗಿವೆ. ಭಾರತವು ಅತಿಹೆಚ್ಚು ಸುಂಕ ಹೇರಿದೆ. ಇದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ’ ಎಂದು ಮಾರ್ನಿಂಗ್ಸ್ಟಾರ್ ಇನ್ವೆಸ್ಟ್ಮೆಂಟ್ ರಿಸರ್ಚ್ ಇಂಡಿಯಾದ ವ್ಯವಸ್ಥಾಪಕ (ಸಂಶೋಧನೆ) ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.