ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಹಣ ತಲುಪಿಸಲು ಅಭಿಯಾನ ಆಗಬೇಕಿದೆ: ಎಫ್‌ಎಸ್‌ಡಿಸಿ

ಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಅಭಿಪ್ರಾಯ
Published 8 ಮೇ 2023, 15:51 IST
Last Updated 8 ಮೇ 2023, 15:51 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ವಾರಸುದಾರರು ಇಲ್ಲದೆ ಉಳಿದುಕೊಂಡಿರುವ ಠೇವಣಿಗಳು ಸಂಬಂಧಪಟ್ಟವರಿಗೆ ತಲುಪುವಂತೆ ಮಾಡಲು ಅಭಿಯಾನ ಕೈಗೊಳ್ಳುವ ಅಗತ್ಯವಿದೆ ಎಂದು ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯು (ಎಫ್‌ಎಸ್‌ಡಿಸಿ) ಅಭಿಪ್ರಾಯಪಟ್ಟಿದೆ. ಈ ಮಂಡಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಖ್ಯಸ್ಥರು.

ಮಂಡಳಿಯ ಸಭೆಯು ಸೋಮವಾರ ನಡೆಯಿತು. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರೂ ಇದರಲ್ಲಿ ಭಾಗಿಯಾಗಿದ್ದರು.

ವಾರಸುದಾರರು ಇಲ್ಲದೆ, 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಿಂದ ಹಾಗೇ ಬಿದ್ದಿರುವ ಒಟ್ಟು ₹35 ಸಾವಿರ ಕೋಟಿಯನ್ನು ಹಣಕಾಸು ಸಂಸ್ಥೆಗಳು ಆರ್‌ಬಿಐಗೆ ವರ್ಗಾವಣೆ ಮಾಡಿವೆ. 10.24 ಕೋಟಿ ಖಾತೆಗಳಲ್ಲಿ ಇಷ್ಟು ಹಣ ಇತ್ತು.

ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಇರುವ ಈ ಹಣದ ಬಗ್ಗೆ ಠೇವಣಿದಾರರು ಮತ್ತು ವಾರಸುದಾರರು ಮಾಹಿತಿ ಪಡೆಯಲು ಕೇಂದ್ರೀಕೃತ ಪೋರ್ಟಲ್‌ ಒಂದನ್ನು ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ದಾಸ್ ಅವರು ಈಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT