ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂಮ್‌ಬರ್ಗ್‌ ಕೋಟ್ಯಧಿಪತಿಗಳ ಸೂಚ್ಯಂಕ:ಗೌತಮ್‌ ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿ

Published 2 ಜೂನ್ 2024, 16:54 IST
Last Updated 2 ಜೂನ್ 2024, 16:54 IST
ಅಕ್ಷರ ಗಾತ್ರ

ನವದೆಹಲಿ: ಬ್ಲೂಮ್‌ಬರ್ಗ್‌ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ ಉದ್ಯಮಿ ಗೌತಮ್‌ ಅದಾನಿ ಅವರು, ರಿಲಯನ್ಸ್‌ ಇಂಡಸ್ಟೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ. 

ತನ್ನ ಒಡೆತನದ ಕಂಪನಿಗಳ ಮಾರುಕಟ್ಟೆ ಮೌಲ್ಯದ ಏರಿಕೆಯಿಂದಾಗಿ ಅದಾನಿ ಅವರ ಸಂಪತ್ತಿನಲ್ಲಿ ಏರಿಕೆಯಾಗಿದೆ. ಸದ್ಯ ಅವರ ಒಟ್ಟು ಸಂಪತ್ತು ₹9.26 ಲಕ್ಷ ಕೋಟಿ ಆಗಿದ್ದು, ಜಾಗತಿಕ ಮಟ್ಟದ ಸಿರಿವಂತರ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ.

ಮುಕೇಶ್‌ ಅಂಬಾನಿ ₹9.09 ಲಕ್ಷ ಕೋಟಿ ಸಂಪತ್ತು ಹೊಂದಿದ್ದು, ಜಾಗತಿಕ ಮಟ್ಟದಲ್ಲಿ 12ನೇ ಸ್ಥಾನದಲ್ಲಿದ್ದಾರೆ.

ಮುಂದಿನ ಹತ್ತು ವರ್ಷಗಳಲ್ಲಿ ಅದಾನಿ ಸಮೂಹವು ಉದ್ಯಮದ ವಿಸ್ತರಣೆಗಾಗಿ ₹7.51 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಅಮೆರಿಕದ ಬ್ರೋಕರೇಜ್ ಸಂಸ್ಥೆಯಾದ ಜೆಫರಿಸ್‌ ಹೇಳಿತ್ತು. ಹಾಗಾಗಿ, ಶುಕ್ರವಾರದ ಷೇರು ವಹಿವಾಟಿನಲ್ಲಿ ಅದಾನಿ ಒಡೆತನದ ಹತ್ತು ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕೆ ₹84,064 ಕೋಟಿ ಸೇರ್ಪಡೆಯಾಗಿತ್ತು. ಒಟ್ಟು ಎಂ–ಕ್ಯಾಪ್‌ ₹17.51 ಲಕ್ಷ ಕೋಟಿ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT