ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಫಸ್ಟ್‌ ಖರೀದಿ: ಅರ್ಜಿ ಸಲ್ಲಿಕೆಗೆ ಆಗಸ್ಟ್‌9ರ ಗಡುವು

Published 10 ಜುಲೈ 2023, 13:23 IST
Last Updated 10 ಜುಲೈ 2023, 13:23 IST
ಅಕ್ಷರ ಗಾತ್ರ

ನವದೆಹಲಿ: ದಿವಾಳಿ ಪ್ರಕ್ರಿಯೆಯಲ್ಲಿ ಇರುವ ಗೋ ಫಸ್ಟ್‌ ವಿಮಾನಯಾನ ಕಂಪನಿಯನ್ನು ಖರೀದಿಸಲು ಆಸಕ್ತಿ ಸೂಚಿಸಿ ಬಿಡ್‌ ಸಲ್ಲಿಸಲು ಆಗಸ್ಟ್ 9ರ ಗಡುವು ನೀಡಲಾಗಿದೆ.

ಈ ಸಂಬಂಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನೇಮಿಸಿರುವ ಅಧಿಕಾರಿಯು (ಆರ್‌ಪಿ) ಖರೀದಿ ಆಸಕ್ತಿ ವ್ಯಕ್ತಪಡಿಸಲು ಹೂಡಿಕೆದಾರರಿಗೆ ಆಹ್ವಾನ ನೀಡಿದ್ದಾರೆ.

ಅರ್ಹ ಹೂಡಿಕೆದಾರರ ಪಟ್ಟಿಯನ್ನು ಆಗಸ್ಟ್‌ 19ರಂದು ಘೋಷಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 24ರವರೆಗೆ ಕಾಲಾವಕಾಶ  ಇರಲಿದೆ ಎಂದು ಆರ್‌ಪಿ ಶೈಲೇಂದ್ರ ಅಜ್ಮೇರ್‌ ಅವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT