ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಹೂಡಿಕೆಗೆ ಚಿನ್ನದ ಇಟಿಎಫ್‌

ಮೇನಲ್ಲಿ₹ 815 ಕೋಟಿ ಹೂಡಿಕೆ
Last Updated 14 ಜೂನ್ 2020, 11:45 IST
ಅಕ್ಷರ ಗಾತ್ರ

ನವದೆಹಲಿ: ಷೇರುಪೇಟೆಯಲ್ಲಿನ ಚಂಚಲ ವಹಿವಾಟು ಮತ್ತು ಕೋವಿಡ್‌ ಬಿಕ್ಕಟ್ಟಿನಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಮೇನಲ್ಲಿ ₹ 815 ಕೋಟಿ ಬಂಡವಾಳ ತೊಡಗಿಸಿರುವುದು ಹೂಡಿಕೆದಾರರ ಬದಲಾದ ಧೋರಣೆಗೆ ಸಾಕ್ಷಿಯಾಗಿದೆ.

ಏಪ್ರಿಲ್‌ನಲ್ಲಿ ಚಿನ್ನದ ಇಟಿಎಫ್‌ನಲ್ಲಿ ₹ 731 ಕೋಟಿ ಹೂಡಿಕೆಯಾಗಿತ್ತು ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

2019ರಿಂದಲೂ ಹೂಡಿಕೆದಾರರಿಗೆ ಚಿನ್ನದ ಇಟಿಎಫ್‌ ಉತ್ತಮ ಸಂಪತ್ತು ಸೃಷ್ಟಿಸುವ ಮಾರ್ಗವಾಗಿದ್ದು, 2019ರ ಆಗಸ್ಟ್‌ನಿಂದ ₹ 3,299 ಕೋಟಿ ಹೂಡಿಕೆಯಾಗಿದೆ.

’ಕೋವಿಡ್‌ನಿಂದಾಗಿ ಜಾಗತಿಕ ಆರ್ಥಿಕತೆಯು ಕುಸಿತದ ಹಾದಿ ಹಿಡಿದಿದೆ. ಈ ಹಂತದಲ್ಲಿ ಚಿನ್ನವು ಮತ್ತೆ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ.ಚಿನ್ನದ ಬೆಲೆ ಏರಿಕೆಯೂ ಲಾಭ ಗಳಿಕೆಯ ಅವಕಾಶವನ್ನು ತಂದುಕೊಟ್ಟಿದೆ’ ಎಂದು ಮಾರ್ನಿಂಗ್‌ಸ್ಟಾರ್‌ ಇನ್‌ವೆಸ್ಟ್‌ಮೆಂಟ್‌ ಅಡ್ವೈಸರಿ ಇಂಡಿಯಾದ ಸಂಶೋಧನಾ ವಿಶ್ಲೇಷಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ಚಿನ್ನದ ನಿಧಿಗಳ ನಿರ್ವಹಣಾ ಸಂಪತ್ತು

₹10,102 ಕೋಟಿ – ಮೇ ಅಂತ್ಯಕ್ಕೆ‌

₹9,198 ಕೋಟಿ – ಏಪ್ರಿಲ್‌ ಅಂತ್ಯಕ್ಕೆ

ಎಂಎಫ್‌ನಲ್ಲಿ ಹೂಡಿಕೆ

₹70,800 ಕೋಟಿ – ಮೇ ಅಂತ್ಯಕ್ಕೆ

₹46 ಸಾವಿರ ಕೋಟಿ – ಏಪ್ರಿಲ್‌ ಅಂತ್ಯಕ್ಕೆ

ಎಂಎಫ್‌ ನಿರ್ವಹಣಾ ಸಂಪತ್ತು

₹ 24.55 ಲಕ್ಷ ಕೋಟಿ – ಮೇ ಅಂತ್ಯಕ್ಕೆ

₹ 24 ಲಕ್ಷ ಕೋಟಿ – ಏಪ್ರಿಲ್ ಅಂತ್ಯಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT