ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದರ ₹350, ಬೆಳ್ಳಿ ₹600 ಏರಿಕೆ

Published 26 ಏಪ್ರಿಲ್ 2024, 14:34 IST
Last Updated 26 ಏಪ್ರಿಲ್ 2024, 14:34 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಶುಕ್ರವಾರ ಏರಿಕೆಯಾಗಿದೆ. 

ಚಿನ್ನದ ದರ 10 ಗ್ರಾಂಗೆ ₹350 ಏರಿಕೆಯಾಗಿ, ₹72,850ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹600 ಹೆಚ್ಚಳವಾಗಿ, ₹84,700 ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,310 ಡಾಲರ್‌ (ಅಂದಾಜು ₹1.95 ಲಕ್ಷ) ಮತ್ತು 28.29 (ಅಂದಾಜು ₹2,296) ಡಾಲರ್‌ನಂತೆ ಮಾರಾಟವಾಗಿದೆ.

ಅಮೆರಿಕವು ಗುರುವಾರ ಜಿಡಿಪಿ ಅಂಕಿ ಅಂಶ ಬಿಡುಗಡೆ ಮಾಡಿತು. ಇದು ಆರ್ಥಿಕ ನಿಧಾನಗತಿ ಮತ್ತು ಹಣದುಬ್ಬರದ ಒತ್ತಡವನ್ನು ಸೂಚಿಸಿದ್ದರಿಂದ ಚಿನ್ನದ ಬೆಲೆ  ಏರಿಕೆಗೆ ಕಾರಣವಾಯಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸೌಮಿಲ್‌ ಗಾಂಧಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT