ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದರ ಏರಿಕೆ

Last Updated 19 ಜುಲೈ 2019, 17:01 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಮಹಾನಗರಗಳಲ್ಲಿ ಚಿನ್ನದ ಬೆಲೆಯು ಶುಕ್ರವಾರ ತಲಾ 10 ಗ್ರಾಂಗಳಿಗೆ ₹ 300ರಂತೆ ಏರಿಕೆ ದಾಖಲಿಸಿದೆ.

ಚಿನ್ನಾಭರಣ ವರ್ತಕರ ಬೇಡಿಕೆ ಹೆಚ್ಚಳದಿಂದ ಬೆಲೆ ಏರುಗತಿಯಲ್ಲಿ ಇದೆ. ಬೆಂಗಳೂರು ಮತ್ತು ಮುಂಬೈಗಳಲ್ಲಿ ಆಭರಣ ಚಿನ್ನದ ಬೆಲೆ ಕ್ರಮವಾಗಿ ₹ 35,252 ಮತ್ತು ₹ 35,057ಕ್ಕೆ ತಲುಪಿದೆ. ದೆಹಲಿಯಲ್ಲಿ ₹ 35,950ಕ್ಕೆ ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ದುಬಾರಿಯಾಗುತ್ತಿರುವುದು ದೇಶಿ ಮಾರುಕಟ್ಟೆಯಲ್ಲಿಯೂ ಪ್ರತಿಫಲನಗೊಳ್ಳುತ್ತಿದೆ.

ಬೆಳ್ಳಿ: ಬೆಳ್ಳಿ ಬೆಲೆಯೂ ಪ್ರತಿ ಕೆಜಿಗೆ ₹ 500ರಂತೆ ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ ₹ 41,200 ಮತ್ತು ಮುಂಬೈನಲ್ಲಿ ₹ 40,585ಕ್ಕೆ ತಲುಪಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಏರುಗತಿಯಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT