ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಐಪಿಒಗೆ 10 ಮರ್ಚೆಂಟ್‌ ಬ್ಯಾಂಕರ್

Last Updated 29 ಆಗಸ್ಟ್ 2021, 13:42 IST
ಅಕ್ಷರ ಗಾತ್ರ

ನವದೆಹಲಿ: ಗೋಲ್ಡ್‌ಮನ್‌ ಸ್ಯಾಚ್ಯ್ಸ್‌ ಸಮೂಹ, ಜೆಪಿ ಮೋರ್ಗನ್‌ ಚೇಸ್‌ ಆ್ಯಂಡ್‌ ಕೊ ಮತ್ತು ಐಸಿಐಸಿಐ ಸೆಕ್ಯುರಿಟೀಸ್‌ ಸೇರಿದಂತೆ 10 ಮರ್ಚೆಂಟ್‌ ಬ್ಯಾಂಕರ್‌ಗಳುಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒ ನಿರ್ವಹಣೆ ಮಾಡಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಸಂಬಂಧ 10 ಮರ್ಚೆಂಟ್ ಬ್ಯಾಂಕರ್‌ಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಒ ನಿರ್ವಹಣೆ ಮಾಡುವ ಸಲುವಾಗಿ ಒಟ್ಟು 16 ದೇಶಿ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ಆಗಸ್ಟ್‌ 26ರಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಗೆ (ಡಿಐಪಿಎಎಂ) ಅರ್ಜಿ ಸಲ್ಲಿಸಿದ್ದವು.

ಎಲ್‌ಐಸಿ ಐಪಿಒ ಗಾತ್ರವು ಭಾರತದ ಬಂಡವಾಳ ಮಾರುಕಟ್ಟೆಗಳಲ್ಲಿ ಇದುವರೆಗೆ ನಡೆದಿರುವ ಎಲ್ಲ ಐಪಿಒಗಳಿಗಿಂತ ಬಹಳ ದೊಡ್ಡದಾಗಿರುವ ನಿರೀಕ್ಷೆ ಇದೆ.

ಮಿಲಿಮನ್‌ ಅಡ್ವೈಸರಿ ಎಲ್‌ಎಲ್‌ಪಿ ಇಂಡಿಯಾ ಕಂಪನಿಯು ಎಲ್‌ಐಸಿಯ ಮೌಲ್ಯದ ಅಂದಾಜು ಮಾಡಿದ ಬಳಿಕ ಸರ್ಕಾರವು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಐಪಿಒ ದಾಖಲೆಪತ್ರಗಳನ್ನು ಸಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT