ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಪಿಸಿಗೆ ಹೊಸ ಸದಸ್ಯರ ನೇಮಕ

Published : 2 ಅಕ್ಟೋಬರ್ 2024, 14:09 IST
Last Updated : 2 ಅಕ್ಟೋಬರ್ 2024, 14:09 IST
ಫಾಲೋ ಮಾಡಿ
Comments

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ ಸಭೆಯ (ಎಂಪಿಸಿ) ಬಾಹ್ಯ ಸದಸ್ಯರಾಗಿ ರಾಮ್‌ ಸಿಂಗ್‌, ಸೌಗತ ಭಟ್ಟಾಚಾರ್ಯ ಮತ್ತು ನಾಗೇಶ್‌ ಕುಮಾರ್‌ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಈ ಸದಸ್ಯರ ಅವಧಿಯು ನಾಲ್ಕು ವರ್ಷ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ತಿಳಿಸಿದೆ.

ರಾಮ್‌ ಸಿಂಗ್‌ ಅವರು ದೆಹಲಿ ಸ್ಕೂಲ್‌ ಆಫ್‌ ಎಕಾನಾಮಿಕ್ಸ್‌ನ ನಿರ್ದೇಶಕರಾಗಿದ್ದಾರೆ. ಸೌಗತಾ ಭಟ್ಟಾಚಾರ್ಯ ಅರ್ಥಶಾಸ್ತ್ರಜ್ಞರಾಗಿದ್ದಾರೆ. ನಾಗೇಶ್‌ ಕುಮಾರ್‌ ಅವರು ದೆಹಲಿಯ ಇನ್‌ಸ್ಟಿಟ್ಯೂಟ್‌ ಫಾರ್ ಸ್ಟಡೀಸ್‌ ಇನ್‌ ಇಂಡಸ್ಟ್ರೀಯಲ್‌ ಡೆವಲಪ್‌ಮೆಂಟ್‌ನ ನಿರ್ದೇಶಕ ಮತ್ತು ಕಾರ್ಯ ನಿರ್ವಾಹಕರಾಗಿದ್ದಾರೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 7‌ರಿಂದ 9ರ ವರೆಗೆ ಎಂಪಿಸಿ ಸಭೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT