ಶನಿವಾರ, ಜನವರಿ 23, 2021
18 °C

ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆಯಡಿ 531 ಲಕ್ಷ ಟನ್‌ ಭತ್ತ ಖರೀದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್‌ಪಿ) 70ಲಕ್ಷಕ್ಕೂ ಅಧಿಕ ರೈತರಿಂದ ಜನವರಿ 8ರವರೆಗೆ 531 ಲಕ್ಷ ಟನ್‌ ಭತ್ತ ಖರೀದಿಸಿದೆ. ಇದರ ಮೊತ್ತವು ₹ 1 ಲಕ್ಷ ಕೋಟಿಯನ್ನೂ ಮೀರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂದಿನ ವರ್ಷ ಖರೀದಿಸಿದ್ದ ಪ್ರಮಾಣಕ್ಕೆ ಹೋಲಿಸಿದರೆ ಶೇ 26ರಷ್ಟು ಏರಿಕೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

2020–21ರ ಮುಂಗಾರು ಮಾರುಕಟ್ಟೆ ಅವಧಿಯಲ್ಲಿ ಸರ್ಕಾರವು ರೈತರಿಂದ ಎಂಎಸ್‌ಪಿಗೆ ಬೆಳೆ ಖರೀದಿಸುವ ಪ್ರಕ್ರಿಯೆ ಮುಂದುವರಿಸಿದೆ.

531 ಲಕ್ಷ ಟನ್‌ಗಳಲ್ಲಿ ಪಂಜಾಬ್‌ ರಾಜ್ಯದ ಪಾಲು 202.77 ಲಕ್ಷ ಟನ್‌ಗಳಷ್ಟಿದೆ.

ಜನವರಿ 8ರವರೆಗೆ ರೈತರಿಂದ ₹ 24,063 ಕೋಟಿ ಮೌಲ್ಯದ ಹತ್ತಿಯನ್ನೂ ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು