ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಧಿ ದಾಸ್ತಾನು ಮಿತಿ ಇನ್ನಷ್ಟು ತಗ್ಗಿಸಿದ ಕೇಂದ್ರ

Published 8 ಡಿಸೆಂಬರ್ 2023, 12:34 IST
Last Updated 8 ಡಿಸೆಂಬರ್ 2023, 12:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಗೋಧಿ ದಾಸ್ತಾನಿನ ಮಿತಿಯನ್ನು ಇನ್ನಷ್ಟು ಇಳಿಕೆ ಮಾಡಿದೆ. ಅಕ್ರಮ ದಾಸ್ತಾನು ತಡೆಯಲು ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.

ಸಗಟು ವ್ಯಾಪಾರಿಗಳ ನಿಗದಿಪಡಿಸಿದ್ದ ದಾಸ್ತಾನು ಮಿತಿಯನ್ನು 2 ಸಾವಿರ ಟನ್‌ನಿಂದ 1 ಸಾವಿರ ಟನ್‌ಗೆ ಇಳಿಸಲಾಗಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್‌ ಚೋಪ್ರಾ ತಿಳಿಸಿದ್ದಾರೆ. 

ಚಿಲ್ಲರೆ ಮಾರಾಟಗಾರರ 10 ಟನ್‌ ಬದಲಿಗೆ 5 ಟನ್‌, ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸುವ ದೊಡ್ಡ ಮಳಿಗೆಗಳಿಗೆ ಪ್ರತಿ ಮಳಿಗೆಗೆ 5 ಟನ್‌ ದಾಸ್ತಾನು ಮಿತಿ ನೀಡಲಾಗಿದೆ. ದಾಸ್ತಾನು ಮಿತಿಯನ್ನು ತಗ್ಗಿಸಲು ವ್ಯಾಪಾರಿಗಳಿಗೆ 30 ದಿನಗಳವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT