ನವದೆಹಲಿ: ‘ಏಪ್ರಿಲ್ 30ರ ವೇಳೆಗೆ ರೈತರಿಂದ 256 ಲಕ್ಷ ಟನ್ ಗೋಧಿ ಖರೀದಿಸಲಾಗಿದೆ’ ಎಂದು ಕೇಂದ್ರ ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಗುರುವಾರ ತಿಳಿಸಿದ್ದಾರೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ 205 ಲಕ್ಷ ಟನ್ ಖರೀದಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಖರೀದಿ ಪ್ರಮಾಣದಲ್ಲಿ ಶೇ 25ರಷ್ಟು ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಪಂಜಾಬ್ನಲ್ಲಿ ಅತಿಹೆಚ್ಚು 103 ಲಕ್ಷ ಟನ್ ಗೋಧಿ ಖರೀದಿಸಲಾಗಿದೆ. ಮಧ್ಯಪ್ರದೇಶದಲ್ಲಿ (67 ಲಕ್ಷ ಟನ್), ಹರಿಯಾಣ (65 ಲಕ್ಷ ಟನ್), ರಾಜಸ್ಥಾನ (11 ಲಕ್ಷ ಟನ್) ಮತ್ತು ಉತ್ತರ ಪ್ರದೇಶದಿಂದ 7.55 ಲಕ್ಷ ಟನ್ ಗೋಧಿ ಖರೀದಿಲಾಗಿದೆ.

ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್ಪಿ) 21.03 ಲಕ್ಷ ರೈತರಿಂದ ಗೋಧಿ ಖರೀದಿಸಲಾಗಿದ್ದು, ₹62,155 ಕೋಟಿ ಪಾವತಿ ಮಾಡಲಾಗಿದೆ.

2024–25ರ ಬೆಳೆ ವರ್ಷದಲ್ಲಿ (ಜುಲೈ–ಜೂನ್) 11.5 ಕೋಟಿ ಟನ್ ಗೋಧಿ ಉತ್ಪಾದನೆ ಗುರಿಯನ್ನು ಕೃಷಿ ಸಚಿವಾಲಯ ಹೊಂದಿದೆ. ಆಹಾರ ಸಚಿವಾಲಯವು ಈ ಪೈಕಿ 312 ಲಕ್ಷ ಟನ್ ಖರೀದಿಸುವ ಗುರಿ ಹೊಂದಿದೆ. ಈ ಗುರಿಯನ್ನು ತಲುಪುವ ಭರವಸೆ ಇದೆ ಎಂದು ಚೋಪ್ರಾ ಹೇಳಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಎನ್ಎಫ್ಎಸ್ಎ) ವ್ಯಾಪ್ತಿಯಲ್ಲಿ ಬರುವ 80 ಕೋಟಿ ಜನರು ಮಾಸಿಕ 5 ಕೆ.ಜಿ ಆಹಾರ ಧಾನ್ಯಗಳಿಗೆ ಅರ್ಹರಾಗಿರುತ್ತಾರೆ. ಈ ಹಂಚಿಕೆಯಲ್ಲಿ ಗೋಧಿ-ಅಕ್ಕಿ ಅನುಪಾತವನ್ನು ಸರ್ಕಾರವು ಹೊಂದಿರುವ ದಾಸ್ತಾನುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪಿಡಿಎಸ್: ಖರೀದಿ ಬಳಿಕ ನಿರ್ಧಾರ

ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಗೋಧಿ ಪೂರೈಕೆಯನ್ನು ಮತ್ತೆ ಆರಂಭಿಸುತ್ತದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಜೀವ್ ಚೋಪ್ರಾ, ಖರೀದಿ ಪ್ರಕ್ರಿಯೆ ಮುಗಿಯುವವರೆಗೆ ಕಾಯಬೇಕಿದೆ. ಇಲ್ಲಿಯವರೆಗೆ, 256 ಲಕ್ಷ ಟನ್ ಗೋಧಿಯನ್ನು ಖರೀದಿಸಲಾಗಿದೆ. ಖರೀದಿ ಮುಗಿದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಆ ನಂತರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಗೋಧಿ ಕೊಯ್ಲು ಪೂರ್ಣ: ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮುಕಾಶ್ಮೀರದಲ್ಲಿ ಗೋಧಿ ಕೊಯ್ಲು ಪೂರ್ಣಗೊಂಡಿದೆ. ಈ ಬಾರಿ ಇಳುವರಿ ಉತ್ತಮವಾಗಿದೆ ಎಂದು ತಿಳಿಸಿದರು.

Highlights - ಪಂಜಾಬ್ನಿಂದ ಅತಿಹೆಚ್ಚು 103 ಲಕ್ಷ ಟನ್ ಗೋಧಿ ಖರೀದಿ 2024–25ರ ಬೆಳೆ ವರ್ಷದಲ್ಲಿ 115 ದಶಲಕ್ಷ ಟನ್ ಗೋಧಿ ಉತ್ಪಾದನೆ ಗುರಿ 312 ಲಕ್ಷ ಟನ್ ಖರೀದಿಸಲು ಆಹಾರ ಸಚಿವಾಲಯ ಯೋಜನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.