ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ನಿಯಂತ್ರಣ: ತೊಗರಿ ಬೇಳೆ ಮಾರಲಿರುವ ಕೇಂದ್ರ

Published 27 ಜೂನ್ 2023, 15:38 IST
Last Updated 27 ಜೂನ್ 2023, 15:38 IST
ಅಕ್ಷರ ಗಾತ್ರ

ನವದೆಹಲಿ: ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ತನ್ನ ಸಂಗ್ರಹದಲ್ಲಿ ಇರುವ ತೊಗರಿ ಬೇಳೆಯನ್ನು ಅರ್ಹ ಮಿಲ್‌ಗಳಿಗೆ ಮಾರಾಟ ಮಾಡಲಿದೆ.

‘ಆಮದು ತೊಗರಿ ಬೇಳೆಯು ದೇಶದ ಮಾರುಕಟ್ಟೆಯನ್ನು ತಲುಪುವವರೆಗೆ ಕೇಂದ್ರವು ತನ್ನ ಸಂಗ್ರಹದಲ್ಲಿನ ತೊಗರಿ ಬೇಳೆಯನ್ನು ಬಿಡುಗಡೆ ಮಾಡಲಿದೆ’ ಎಂದು ಪ್ರಕಟಣೆ ತಿಳಿಸಿದೆ.

ಆನ್‌ಲೈನ್‌ ಹರಾಜು ಮೂಲಕ ತೊಗರಿ ಬೇಳೆಯನ್ನು ಮಾರಾಟ ಮಾಡುವಂತೆ ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್) ಹಾಗೂ ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳಕ್ಕೆ (ಎನ್‌ಸಿಸಿಎಫ್) ಸೂಚನೆ ನೀಡಿದೆ ಎಂದು ಕೂಡ ಅದು ತಿಳಿಸಿದೆ.

ತೊಗರಿ ಬೇಳೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ, ಅದರಿಂದಾಗಿ ಗ್ರಾಹಕರಿಗೆ ತೊಗರಿಬೇಳೆಯು ಎಷ್ಟರಮಟ್ಟಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಯಿತು ಎಂಬುದನ್ನು ಆಧರಿಸಿ ಮುಂದೆ ಎಷ್ಟು ಪ್ರಮಾಣದಲ್ಲಿ ಹಾಗೂ ಎಷ್ಟು ದಿನಗಳಿಗೆ ಒಮ್ಮೆ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ.

ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ, ಉದ್ದಿನಬೇಳೆ ಹಾಗೂ ತೊಗರಿ ಬೇಳೆಯ ದಾಸ್ತಾನಿನ ಮೇಲೆ ಈಗಾಗಲೇ ಮಿತಿ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT