ಶನಿವಾರ, ಮೇ 15, 2021
26 °C

ಜಿಎಸ್‌ಟಿಆರ್‌–3ಬಿ ವಿಳಂಬಕ್ಕೆ ಶುಲ್ಕ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾರ್ಚ್‌ ಮತ್ತು ಏಪ್ರಿಲ್‌ಗೆ ಸಂಬಂಧಿಸಿದಂತೆ ಜಿಎಸ್‌ಟಿಆರ್‌–3ಬಿ ಸಲ್ಲಿಕೆ ಹಾಗೂ ತೆರಿಗೆ ಪಾವತಿಯಲ್ಲಿನ ವಿಳಂಬಕ್ಕೆ ತೆರಬೇಕಾದ ಶುಲ್ಕವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಅಲ್ಲದೆ ವಿಳಂಬ ಪಾವತಿಗೆ ವಿಧಿಸುತ್ತಿದ್ದ ಬಡ್ಡಿ ದರವನ್ನೂ ಕಡಿತ ಮಾಡಿದೆ.

ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯ ಸಂದರ್ಭದಲ್ಲಿ ತೆರಿಗೆ ಪಾವತಿದಾರು ಜಿಎಸ್‌ಟಿ ನಿಯಮಗಳನ್ನು ಪಾಲಿಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ವಾರ್ಷಿಕ ₹ 5 ಕೋಟಿಗಿಂತಲೂ ಅಧಿಕ ಮೊತ್ತದ ವಹಿವಾಟು ನಡೆಸುವವರಿಗೆ ಜಿಎಸ್‌ಟಿಆರ್‌–3ಬಿ ಸಲ್ಲಿಸಲು 15 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ವಿಳಂಬ ಶುಲ್ಕ ಇಲ್ಲದೆಯೇ ತೆರಿಗೆ ಪಾವತಿಸಲು ಅವಕಾಶ ನೀಡಲಾಗಿದೆ.

ವಾರ್ಷಿಕ ₹ 5 ಕೋಟಿಯವರೆಗಿನ ವಹಿವಾಟು ನಡೆಸುವವರಿಗೆ ಜಿಎಸ್‌ಟಿಆರ್–3ಬಿ ಸಲ್ಲಿಸಲು 30 ದಿನಗಳ ಹೆಚ್ಚುವರಿ ಕಾಲಾವಕಾಶ ಸಿಗಲಿದೆ. ವಿಳಂಬ ಶುಲ್ಕ ಇರುವುದಿಲ್ಲ ಎಂದು ಹೇಳಿದೆ.

ತಡವಾಗಿ ರಿಟರ್ನ್ಸ್‌ ಸಲ್ಲಿಸುವವರಿಗೆ ಬಡ್ಡಿ ದರ ಇಳಿಕೆ ಮಾಡಲಾಗಿದೆ. 15 ದಿನಗಳ ಹೆಚ್ಚುವರಿ ಅವಧಿಗೆ ಶೇಕಡ 9ರ ಬಡ್ಡಿದರ ಅನ್ವಯವಾಗಲಿದ್ದು, ಆ ಬಳಿಕ ಶೇ 18ರಷ್ಟು ಬಡ್ಡಿದರ ತೆರಬೇಕಾಗುತ್ತದೆ.

ಜಿಎಸ್‌ಟಿಆರ್‌–1 ಸಲ್ಲಿಕೆ ಅವಧಿಯನ್ನು ಮೇ 11ರಿಂದ ಮೇ 26ರವರೆಗೆ ವಿಸ್ತರಿಸಲಾಗಿದೆ. ಕಂಪೋಸಿಷನ್‌ ಸ್ಕೀಮ್‌ ಆಯ್ಕೆ ಮಾಡಿಕೊಂಡಿರುವವರಿಗೆ ಜಿಎಸ್‌ಟಿಆರ್–4 ಸಲ್ಲಿಸಲು ಮೇ 31ರವರೆಗೆ ಅವಕಾಶ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು