ಜಿಎಸ್‌ಟಿ ವಿಳಂಬ ಶುಲ್ಕ ಎರಡು ತಿಂಗಳ ಅವಧಿಗೆ ಮನ್ನಾ

ನವದೆಹಲಿ: 2021–22ನೇ ಸಾಲಿನಲ್ಲಿ ಜಿಎಸ್‌ಟಿ ವಿವರಗಳನ್ನು ತಡವಾಗಿ ಸಲ್ಲಿಸುವ ಸಣ್ಣ ತೆರಿಗೆದಾರರಿಗೆ ವಿಳಂಬ ಶುಲ್ಕವನ್ನು ಎರಡು ತಿಂಗಳ ಅವಧಿಗೆ ಮನ್ನಾ ಮಾಡಲಾಗಿದೆ.
ವಾರ್ಷಿಕ ಜಿಎಸ್‌ಟಿಆರ್–4 ಸಲ್ಲಿಸುವುದು ತಡವಾದಲ್ಲಿ ವಿಳಂಬ ಶುಲ್ಕವನ್ನು ಮೇ 1ರಿಂದ ಜೂನ್ 30ರವರೆಗಿನ ಅವಧಿಗೆ ಮನ್ನಾ ಮಾಡಲಾಗುತ್ತದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳ ಮಂಡಳಿಯು ಅಧಿಸೂಚನೆಯಲ್ಲಿ ಹೇಳಿದೆ.
ಜಿಎಸ್‌ಟಿಆರ್–4 ಸಲ್ಲಿಸುವುದು ತಡವಾದಲ್ಲಿ ಪ್ರತಿದಿನಕ್ಕೆ ₹ 50ರಂತೆ (ಗರಿಷ್ಠ ₹ 2,000) ವಿಳಂಬ ಶುಲ್ಕ ವಿಧಿಸಲಾಗುತ್ತದೆ. ಆದರೆ, ಪಾವತಿಸಬೇಕಿರುವ ಒಟ್ಟು ತೆರಿಗೆಯು ಶೂನ್ಯವಾಗಿದ್ದಲ್ಲಿ, ಗರಿಷ್ಠ ₹ 500ರಷ್ಟು ವಿಳಂಬ ಶುಲ್ಕ ವಿಧಿಸಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.